ದೊಡ್ಡಬಳ್ಳಾಪುರ: ಭಾನುವಾರ ಸಂಜೆ ಸುರಿದ ಮಳೆಯಲ್ಲಿ ಗೆಳತಿಯರೊಂದಿಗೆ ಆಟವಾಡಲು ತೆರಳಿದ್ದ ಬಾಲಕಿ ಮಳೆ ನೀರಲ್ಲಿ ಮುಳಗಿ ಸಾವನಪ್ಪಿರುವ ಘಟನೆ ತಾಲೂಕಿನ ತಂಬೇನಹಳ್ಳಿಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಗಂಗಲಕ್ಷ್ಮೀ(10) ಎಂದು ಗುರುತಿಸಲಾಗಿದ್ದು,ಭಾನುವಾರ ಸಂಜೆ ಸುರಿದ ಮಳೆ ಸಂಧರ್ಭದಲ್ಲಿ ಗೆಳತಿಯರ ಜೊತೆ ಆಟವಾಡುತ್ತಿದ್ದ ವೇಳೆ ಕೃಷಿ ಹೊಂಡದಲ್ಲಿ ಶೇಖರಣೆಯಾದ ಮಳೆ ನೀರಲ್ಲಿ ಮುಳುಗಿದ ಕಾರಣ ಘಟನೆ ಸಂಭವಿಸಿದೆ ಎನ್ನಲಾಗಿದೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ತಂಬೇನಹಳ್ಳಿ ಗ್ರಾಮದ ಗಂಗಲಕ್ಷ್ಮೀ, ನಾಗಮ್ಮ, ಶಿಲ್ಪ ಎಂಬ ಮೂವರು ಗೆಳತಿಯರು ಭಾನುವಾರ ಸಂಜೆ ಸುರಿದ ಮಳೆಯ ನೀರಲ್ಲಿ ಆಟವಾಡುತ್ತಿದ್ದ ವೇಳೆ.ಮಳೆ ನೀರಿನಿಂದ ತುಂಬಿದ್ದ ಕೃಷಿ ಹೊಂಡದಲ್ಲಿ ಬಿದ್ದ ಕಾರಣ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಹರಿತಲೇಖನಿಗೆ ತಿಳಿಸಿದ್ದಾರೆ.
ಘಟನೆ ಕುರಿತಂತೆ ಹರಿತಲೇಖನಿ ಹಿರಿಯ ಪೊಲೀಸ್ ಮೂಲಗಳ ಮಾಹಿತಿ ಪಡೆದಿದ್ದು, ಘಟನೆಯಲ್ಲಿ 10 ವರ್ಷದ ಗಂಗಲಕ್ಷ್ಮೀ ಸಾವನಪ್ಪಿ ಉಳಿದ ಇಬ್ಬರು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕೃತ ಮಾಹಿತಿ ನೀಡಿದ್ದಾರೆ.