ದೊಡ್ಡಬಳ್ಳಾಪುರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕನ್ನಡ ಸಾರಸ್ವತ ಲೋಕದ ಜ್ಞಾನ ಪೀಠ ಪುರಸ್ಕೃತರ ನೆನಪು ಕಾರ್ಯಕ್ರಮದಲ್ಲಿ ಸಾಹಿತಿ ವಿ.ಕೃ.ಗೋಕಾಕ್ ಜನ್ಮದಿನವನ್ನು ಡಾ.ರಾಜ್ ಕುಮಾರ್ ಕಲಾ ಮಂದಿರದಲ್ಲಿನ ಕಚೇರಿಯಲ್ಲಿ ಆಚರಿಸಲಾಯಿತು.
ವಿ.ಕೃ.ಗೋಕಾಕ್ ಭಾಷಾಪಾಂಡಿತ್ಯ ಮತ್ತು ಸಾಹಿತ್ಯದ ಕುರಿತು ಮಾತನಾಡಿದ ಪತ್ರಕರ್ತ ಎ.ನಾಗರಾಜ, ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಗಳನ್ನು ವಿವರಿಸಿದರು ಹಾಗು ಶಾಲಾ ಶಿಕ್ಷಣದಲ್ಲಿ ಭಾಷ ಮಾಧ್ಯಮ ನೀತಿಯನ್ನು ಗೋಕಾಕರು ಸ್ಪಷ್ಟಪಡಿಸಿದರು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ರಾಜೇಂದ್ರ ಕುಮಾರ್ ಗೋಕಾಕ್ ಚಳುವಳಿಯ ದಿನಗಳ ಮೆಲಕು ಹಾಕಿದರು.
ಕಲ್ಪತರು ಪವರ್ ಲೂಮ್ಸ್ ಸೊಸೈಟಿ ಮಾಜಿ ಅಧ್ಯಕ್ಷ ಕೆ.ಟಿ.ವೆಂಕಟಚಲಯ್ಯ ಮಾತನಾಡಿ, ಗೋಕಾಕರು ಜೀವನದಲ್ಲಿ ಹಲವಾರು ಮೆಟ್ಟಿಲುಗಳನ್ನು ಏರಿದವರು,ಅವರ ಜ್ಞಾನ ಸಂಪತ್ತು ತುಂಬಿದ ಕೊಡದಂತೆ ಇತ್ತು, ಸಾಹಿತ್ಯದ ಪ್ರತಿಯೊಂದು ಮಜಲುಗಳಲ್ಲಿ ತಮ್ಮನ್ನೇ ತೊಡಗಿಸಿಕೊಂಡು ವಿಶಿಷ್ಟ ಶೈಲಿಯ ಬರೆವಣಿಗೆ ಯ ಮುಖಾಂತರ ಸಾಹಿತ್ಯಾಸಕ್ತರನ್ನು ಆಕರ್ಷಿಸುವ ಗುಣ ಅವರ ಸಾಹಿತ್ಯಕ್ಕಿತ್ತು ಎಂದರು.
ಮಖ್ಯ ಅತಿಥಿಗಳಾಗಿ ಸಂಕ್ರಾಂತಿ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಮಂಜುನಾಥ್, ವಿಜಯಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ನಂಜಪ್ಪ,ಗುಟ್ಟೆ ವಿಶ್ವನಾಥ್, ತಾಲೂಕು ಕಸಾಪ ಅಧ್ಯಕ್ಷ ಪ್ರಮಿಳ ಮಹಾದೇವ್, ಕಾರ್ಯಧ್ಯಕ್ಷ ಶ್ರೀನಿವಾಸ್ ತರಿದಾಳ್, ಸ್ವಾಗತವನ್ನು ಸಹ ಕಾರ್ಯದರ್ಶಿ ಗಂಗರಾಜ ಶಿರವಾರ, ಗೌರವ ಕಾರ್ಯದರ್ಶಿ ಡಿ.ಈ.ಶಿವಕುಮಾರ್, ನಗರಾಧ್ಯಕ್ಷ ಹರಿಕುಮಾರ್ ಉಪಾಧ್ಯಕ್ಷ ಸೂರಿ, ಸಾಹಿತ್ಯಾಸಕ್ತರಾದ ಗಿರೀಶ್, ಪ್ರವೀಣ್ ಕುಮಾರ್, ಎನ್.ವೆಂಕಟೇಶ್, ತುಳಸಿರಾಜ್, ದರ್ಶನ್ ಕಮಾರ್, ಶ್ರೇಯಸ್ ಮತ್ತಿತರು ಭಾಗವಹಿಸಿದ್ದರು.