ದೊಡ್ಡಬಳ್ಳಾಪುರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಜರಾಹೊಸಳ್ಳಿ ವ್ಯಾಪ್ತಿಯ ವಿವೇಕಾನಂದ ನಗರದಲ್ಲಿನ ಮಂಜುಳಗಂಗರಾಜು ಅವರು ಮನೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ” ಗೀತ – ಗಾಯನ ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖಂಡ ತಿಪ್ಪಾಪುರದ ಚಂದ್ರೇಗೌಡ ಶ್ರೀ ಕೃಷ್ಣ ಭಾರತದಲ್ಲಿ ಬರೀ ಧಾರ್ಮಿಕ ನಾಯಕನಾಗಿ ಮಾತ್ರವೇ ಉಳಿದಿಲ್ಲ.ಸಾಂಸ್ಕೃತಿಕ ನಾಯಕತ್ವದ ಮಹತ್ತರ ಲಕ್ಷಣಗಳನ್ನು ಹೊಂದಿದ್ದು, ಶ್ರೀಕೃಷ್ಣನನ್ನು ಅನುಸರಿಸುವ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಭಜನೆ ಕೃಷ್ಣಮೂರ್ತಿ,ತಾಳವಾದ್ಯ ಪಿ.ಲಕ್ಷ್ಮೀಪತಿ,ಗೀತ ಗಾರುಡಿಗ ವೆಂಕಟೇಶ್ ಹಾಗೂ ಬಾಲ ಕಲಾವಿದ ಶ್ರೇಯಸ್ ಗಿರೀಶ್ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಯೋಜಕರಾದ ಮಂಜುಳಗಂಗರಾಜು ವಹಿಸಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪ್ರಮೀಳಮಹಾದೇವ್,ತಾಲ್ಲೂಕು ಕಾರ್ಯದರ್ಶಿ ಡಿ.ಈ.ಶಿವಕುಮಾರ್,ನಗರಾಧ್ಯಕ್ಷ ಬಿ.ಪಿ.ಹರಿಕುಮಾರ್,ನಗರ ಕಾರ್ಯದರ್ಶಿ ಶಾಂತಿನಗರ ಪ್ರವೀಣ್,ನಗರ ಉಪಾಧ್ಯಕ್ಷ ಸೂರಿ,ಕನ್ನಡ ಜಾಗೃತಿ ವೇದಿಕೆಯ ಖಜಾಂಚಿ ಟಿ.ಗಿರೀಶ್,ಜಿಲ್ಲಾ ಕಸಾಪ ಮಾಜಿ ಕೋಶಾಧ್ಯಕ್ಷ ನ.ಮಹಾದೇವ್,ಗಂಗರಾಜ್ ಶಿರವಾರ,ರಾಕೇಶ್, ನಾಗೇಂದ್ರ,ಕಿರಣ್,ರಾಧಾ ಗಿರೀಶ್,ಹೊನ್ನೂರಪ್ಪ,ಕೀರ್ತನಾ ಹಾಗೂ ಬಾಲಕೃಷ್ಣ ಮುಂತಾದವರು ಭಾಗವಹಿಸಿದ್ದರು.