ದೊಡ್ಡಬಳ್ಳಾಪುರ: ಕಳೆದ ಒಂದು ವರ್ಷದಿಂದ ದೊಡ್ಡಬಳ್ಳಾಪುರ ವೃತ್ತ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಘವ ಎಸ್.ಗೌಡರನ್ನ ಸಿಐಡಿಗೆ ವರ್ಗಾಯಿಸಲಾಗಿದೆ.
ಇಂದು ಸಂಜೆ ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್ ಅವರ ಪರವಾಗಿ ಐಪಿಎಸ್ ಅಧಿಕಾರಿ ಡಾ.ಎಂ.ಎ.ಸಲೀಂ ಅವರು ಮಾಡಿರುವ ರಾಜ್ಯದ 81ಮಂದಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ( ಸಿವಿಲ್) ವರ್ಗಾವಣೆ ಪಟ್ಟಿಯಲ್ಲಿ ರಾಘವ ಎಸ್.ಗೌಡರ ಹೆಸರು ಸೇರಿದೆ.
ರಾಘವ ಎಸ್.ಗೌಡ ಕಳೆದ ಒಂದು ವರ್ಷದಿಂದ ತಾಲೂಕಿನ ಜನರ ಚಿರಪರಿಚಿತರಾಗಿ, ಕರೊನಾ ಸಂಧರ್ಭದಲ್ಲಿ ತಾಲೂಕಿನ ಜನರ ರಕ್ಷಣೆಗೆ ಕರೊನಾ ವಾರಿಯರ್ ಆಗಿ ಹೋರಾಟ ನಡೆಸಿ,ಕರೊನಾ ಸೋಂಕಿಗೂ ಒಳಗಾಗಿ ಪ್ರಚಾರ ಬಯಸದೆ ಚಿಕಿತ್ಸೆ ಪಡೆದು ಕೆಲವೇ ದಿನದಲ್ಲಿ ಗುಣಮುಖರಾಗಿದ್ದರು.
ಇಂದು ಇಲಾಖೆಯ ಆದೇಶ ಅನ್ವಯ ವರ್ಗಾವಣೆಯಾಗಿದ್ದು ಅವರ ಸ್ಥಾನಕ್ಕೆ ಬೆಂಗಳೂರಿನ ಸಿಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹರೀಶ್.ಎಂ.ಆರ್ ಅವರನ್ನು ವರ್ಗಾಯಿಸಲಾಗಿದೆ.