ದೊಡ್ಡಬಳ್ಳಾಪುರ: ಡಿಜಿ ಹಳ್ಳಿ ,ಕೆಜಿ ಹಳ್ಳಿ ಪುಲಕೇಶಿನಗರದಲ್ಲಿ ನಡೆದ ದುರ್ಘಟನೆ ಪೂರ್ವ ನಿಯೋಜಿತ ಮತ್ತು ದುರುದ್ದೇಶಿತವಾಗಿದ್ದು,ಈ ಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರೆನ್ನಲಾಗಿರುವ ಎಸ್ ಡಿ ಪಿಐ / ಪಿಎಫ್ ಐ ನಿಷೇಧಿಸಬೇಕೆಂದು ಒತ್ತಾಯಿಸಿ ಬಜರಂಗದಳದ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಬಜರಂಗದಳದ ತುಮಕೂರು ವಿಭಾಗ ಸಂಚಾಲಕ್ ನರೇಶ್ ರೆಡ್ಡಿ, ಆ.11 ರಂದು ಬೆಂಗಳೂರಿನ ದೇವರು ಜೀವನ ಮಾಡುವ ಹಳ್ಳಿ (ಡಿ. ಜೆ.ಹಳ್ಳಿ) ಕೆ. ಜಿ ಹಳ್ಳಿ ಪುಲಕೇಶಿನಗರಗಳಲ್ಲಿ ನಡೆದ ಘಟನೆ ಪೂರ್ವನಿಯೋಜತವಾಗಿದ್ದು,ದೂರು ನೀಡುವ ನೆಪದಲ್ಲಿ ಎಸ್ ಡಿಪಿಐ/ ಪಿಎಫ್ ಐ ಕಾರ್ಯಕರ್ತರು ಗಲಭೆ ಸೃಷ್ಟಿಸಿ ಪೊಲೀಸರು, ಪತ್ರಕರ್ತರು ಹಾಗೂ ಅಮಾಯಕ ಹಿಂದುಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.ಅಲ್ಲದೆ,ಪೊಲೀಸ್ ಠಾಣೆ,ವಾಹನಗಳ ನಾಶ,ಹಿಂದುಗಳ ಮನೆ ನಾಶ ಮಾಡಿರುವ ಈ ಭಯೋತ್ಪಾದಕ ಪುಂಡರ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ್ ಮಧು ಬೇಗಲಿ ಮಾತನಾಡಿ,ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪೊಲೀಸರಿಗೆ ಮಾಹಿತಿ ನೀಡದೆ ತಾನೊಬ್ಬ ಜನಪ್ರತಿನಿಧಿ ಎಂಬುದನ್ನು ಮರೆತು ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ವಿಫಲರಾಗಿದ್ದಾರೆ. ಈ ಕೂಡಲೇ ಪೊಲೀಸರು ಘಟನೆಯಲ್ಲಿ ಭಾಗಿಯಾಗಿರುವ ಎಲ್ಲಾ ಗಲಭೆಕೊರರನ್ನು ಬಂಧಿಸಿ ವಿಚಾರಣೆ ನಡೆಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.ಮತ್ತು ಪೂರ್ವನಿಯೋಜಿತ ಮತ್ತು ದುರುದ್ದೇಶಿತವಾಗಿ ಮಾಡಿರುವ ಗಲಭೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ SDPI/PFI ಸಂಘಟನೆಯ ಮೇಲೆ ನಿರ್ಬಂಧ ಹೇರಬೇಕೆಂದರುಮ
ಈ ವೇಳೆ ತಾಲೂಕು ಸಂಚಾಲಕ ಭಾಸ್ಕರ್,ಸಹಸಂಚಾಲಕ್ ಮಹೇಶ್,ನಗರ ಸಹ ಸಂಚಾಲಕ್ ವೀರರಾಜು,ಸತ್ಸಂಗ ಪ್ರಮುಖ್ ಕುಶಲ್, ಘಟಕ ಸಂಚಾಲಕ್ ನವೀನ್, ಕಾರ್ಯಕರ್ತರಾದ ತೇಜು, ಪುನೀತ್, ರಾಜೇಶ್ ಮತ್ತಿತರಿದ್ದರು.
ಇದಕ್ಕು ಮುನ್ನ ನಗರದ ಹೊರವಲಯದಲ್ಲಿರುವ ರೈಲ್ವೆ ಸ್ಟೇಷನ್ ಬಳಿ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಸಮ್ಮುಖದಲ್ಲಿ ಪ್ರತಿಭಟನೆ ನಡೆಸಿದರು.