ದೊಡ್ಡಬಳ್ಳಾಪುರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅತೀಕ್ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ನರೇಗಾ ಯೋಜನೆ, ಎಸ್ ಡಬ್ಲ್ಯೂ ಎಂ ಯೋಜನೆ, ಹಾಗೂ ಇತರ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆಪುರ ಗ್ರಾಮದ ಜಲಾಮೃತ ಕೆರೆ,ಕಣಿವೆಪುರ ಗ್ರಾಮದ ದಲ್ಲಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ, ಸೀಗೆಹಳ್ಳಿ ಗ್ರಾಮದ ರೇಷ್ಮೆ ಕೃಷಿ ತೋಟದ ಅಭಿವೃದ್ಧಿ ಕಾಮಗಾರಿ.
ಮೆಳೆಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಳೆಕೋಟೆ ಗ್ರಾಮದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗಿರುವ ಉದ್ಯಾನವನ, ಮಳೆ ನೀರಿನ ಕೊಯ್ಲು ,ಮುಕ್ಕೇನ ಹಳ್ಳಿ ಗ್ರಾಮದ ಅಂಗನವಾಡಿ ಕಟ್ಟಡ, ಲಿಂಗನಹಳ್ಳಿ ಗೇಟ್ ಹತ್ತಿರ ರಸ್ತೆ ಬದಿ ಗಿಡ ನೆಡುವ ಕಾಮಗಾರಿ,ರಾಜಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜಘಟ್ಟ ಗ್ರಾಮದಲ್ಲಿ ನಿರ್ಮಿಸಲಾಗಿರುವ ರಿಚಾರ್ಜ್ ಫಿಟ್ ಹಾಗೂ ಒಕ್ಕಣೆ ಕಣ ಕಾಮಗಾರಿ,ಹಾಗೆಯೇ ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಸಮುದಾಯ ಶೌಚಾಲಯ ಕಾಮಗಾರಿ, ಜಿಂಕೆಬಚ್ಚಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಘನತ್ಯಾಜ್ಯ ವಿಲೇವಾರಿ ಘಟಕ, ಜಿಂಕೆಬಚ್ಚಹಳ್ಳಿ ಗ್ರಾಮದ ಸೆಮಿ ಇಂಟಿಗ್ರೇಟೆಡ್ ಸೋಲಾರ್ ಸಿಸ್ಟಮ್, ಮಜರಾ ಹೊಸಹಳ್ಳಿ ಗ್ರಾಮಪಂಚಾಯಿತಿಯಲ್ಲಿ ನಿರ್ಮಿಸಲಾಗಿರುವ ಡಿಜಿಟಲ್ ಲೈಬ್ರರಿ, ಮತ್ತು ಸೆಂಟ್ರಲೈಸ್ಡ್ ಸೋಲಾರ್ ಸಿಸ್ಟಂ ಪರಿಶೀಲಿಸಿದರು.
ಈ ವೇಳೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಂ.ನಾಗರಾಜ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತ ಮಂಜುನಾಥ್,ತಾಪಂ ಇಒ ಹೆಚ್.ಮುರುಡಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರಾದ ಯೋಗೇಶ್ ಮತ್ತು ಪ್ರಸಾದ್,ಸಹಾಯಕ ನಿರ್ದೇಶಕಿ ಸಿ.ಗೀತಾಮಣಿ,ಕಿರಿಯ ಇಂಜಿನಿಯರ್ಗಳಾದ ಶಿವಣ್ಣ ಮತ್ತು ದೇವೇಂದ್ರ,ಸಾಮಾಜಿಕ ಅರಣ್ಯ ವಿಭಾಗದ ಲಕ್ಷ್ಮೀನಾರಾಯಣ,ರೇಷ್ಮೆ ಇಲಾಖೆಯ ಉದಯ್,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಪ್ರಕಾಶ್,ಶಿವರಾಜ್,ರಮಿತಾ,ಸೋಮ ಮೂರ್ತಿ,ನರೇಗಾ ಯೋಜನೆಯ ತಾಂತ್ರಿಕ ಸಹಾಯಕರು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.