ಬೆಳೆ ಸಮೀಕ್ಷೆ ಉತ್ಸವ-2020 : ಜಮೀನಿನಲ್ಲಿಯೇ ಬೆಳೆ ಸಮೀಕ್ಷೆ ಆ್ಯಪ್‍ಗೆ ಚಾಲನೆ ನೀಡಿದ ಡಿಸಿಎಂ

ಬಾಗಲಕೋಟೆ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯ ಆ್ಯಪ್‍ನಿಂದ ರೈತರ ಜಮೀನಿಗೆ ತೆರಳಿ ರೈತರಿಂದಲೇ ಬೆಳೆಯನ್ನು ನಮೂದಿಸುವ ಕಾರ್ಯಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಚಾಲನೆ ನೀಡಿದರು.

ತಾಲೂಕಿನ ಬೇವಿನಮಟ್ಟಿ ಗ್ರಾಮದ ರೈತ ಕಲ್ಮೇಶ ಮೇಟಿ ಅವರ ರಿ.ಸ.ನಂ 39/1 ಜಮೀನಿನಲ್ಲಿ ಬೆಳೆದ ಗೋವಿನ ಜೋಳ ಬೆಳೆಯ ಛಾಯಾಚಿತ್ರ ಅಪ್‍ಲೋಡ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಬೆಳೆ ಸಮೀಕ್ಷೆ ಯೋಜನೆಯನ್ವಯ ಜಿಲ್ಲೆಯ ರೈತರು ತಮ್ಮ ಜಮೀನಿನ ಸರ್ವೆ ನಂಬರ, ಹಿಸ್ಸಾ ನಂಬರವಾರು ತಾವು ಬೆಳೆದ ಕೃಷಿ ಬೆಳೆ ಹಾಗೂ ಬಹುವಾರ್ಷಿಕ ತೋಟಗಾರಿಕೆ, ಅರಣ್ಯ ಇತರೆ ಬೆಳೆ ಸಮೀಕ್ಷೆ 2020 ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಸ್ವತಃ ತಾವೇ ಬೆಳೆ ಸಮೀಕ್ಷೆ ಮೂಲಕ ನೋಂದಾಯಿಸಬಹುದಾಗಿದೆ ಎಂದು ತಿಳಿಸಿದರು.

ಬೆಳೆ ನಮೂದಿಸಲು ಆಗಸ್ಟ 24 ಕೊನೆಯ ದಿನವಾಗಿದ್ದು, ರೈತರು ನಿಗದಿತ ಸಮಯದಲ್ಲಿ ತಾವು ಬೆಳೆದ ಬೆಳೆಯನ್ನು ಅಪ್‍ಲೋಡ್ ಮಾಡಬೇಕು. ಈ ಯೋಜನೆಯ ಸದುಪಯೋಗವನ್ನು ರೈತರು ಪಡದುಕೊಳ್ಳಬೇಕು. ಇಲ್ಲದಿದ್ದರೆ ಇಲಾಖೆಯಿಂದ ದೊರೆಯುವ ವಿವಿಧ ಸೌಲತ್ತುಗಳಿಂದ ವಂಚಿತರಾಗುವಿರಿ ಎಂದು ತಿಳಿಸಿದರು.

ಈ ಸಮೀಕ್ಷೆಯಿಂದ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ವಿಸ್ತೀರ್ಣ ಲೆಕ್ಕ ಹಾಕುವಲ್ಲಿ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವಲ್ಲಿ, ಬೆಳೆ ವಿಮಾ ಯೋಜನೆಯಡಿ ಸರ್ವೆ ನಂಬರವಾರು ಬೆಳೆ ಪರಿಶೀಲನೆ ಹಾಗೂ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಹಾಗೂ ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆ ಅನುಷ್ಠಾನಕ್ಕೆ ಸಹಾಯವಾಗಲಿದೆ ಎಂದು ತಿಳಿಸಿದರು.

ರೈತರು ತಪ್ಪದೇ ತಮ್ಮ ಜಮೀನಿನಲ್ಲಿರುವ ಬೆಳೆಗಳ ವಿವರಗಳನ್ನು ದಾಖಲಿಸಬೇಕು. ಗ್ರಾಮಗಳಲ್ಲಿರುವ ವಿದ್ಯಾವಂತ ಯುವಕರು ರೈತರ ಬೆಳೆ ಸಮೀಕ್ಷೆ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ತಮ್ಮ ಹಳ್ಳಿಯ ರೈತ ಸಮೂದಾಯ ಬೆಳೆ ಮಾಹಿತಿಯನ್ನು ದಾಖಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳು, ರೇಷ್ಮೆ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ, ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಕೃಷಿ ಉಪನಿರ್ದೇಶಕ ಕೊಂಗವಾಡ ಸೇರಿದಂತೆ ಇತರರು ಇದ್ದರು.

ರಾಜಕೀಯ

ತುರ್ತು ಪರಿಸ್ಥಿತಿಗೆ 50 ವರ್ಷ ತುಂಬಿದೆ: ಕಾಂಗ್ರೆಸ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ದಾಳಿ

ತುರ್ತು ಪರಿಸ್ಥಿತಿಗೆ 50 ವರ್ಷ ತುಂಬಿದೆ: ಕಾಂಗ್ರೆಸ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ದಾಳಿ

ಭಾರತದ ಆತ್ಮಶಕ್ತಿಯ ಮೇಲೆ ಪ್ರಹಾರ ನಡೆಸಿದ, ಪ್ರಜಾಪ್ರಭುತ್ವವನ್ನೇ ಹತ್ತಿಕ್ಕಿದ ಕೃತ್ಯಕ್ಕೆ ಅರ್ಧ ದಶಕ; ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy)

[ccc_my_favorite_select_button post_id="109926"]
ಅವರದ್ ಬಿಡ್ರೀ.. ನೀವ್ ಸಿಎಂ ಆಗಿದ್ದಾಗ ವರದಿಗಳನ್ನು ಏನ್ ಮಾಡ್ದೇ ಹೇಳು; ಹೆಚ್‌ಡಿಕೆಗೆ ಹೆಚ್.ಕೆ.ಪಾಟೀಲ್ ತಿರುಗೇಟು

ಅವರದ್ ಬಿಡ್ರೀ.. ನೀವ್ ಸಿಎಂ ಆಗಿದ್ದಾಗ ವರದಿಗಳನ್ನು ಏನ್ ಮಾಡ್ದೇ ಹೇಳು; ಹೆಚ್‌ಡಿಕೆಗೆ

ಈಗ ಅಕ್ರಮ ಗಣಿಗಾರಿಕೆ ಪತ್ರದ ಮಾತಾಡುವ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅಭಿಷೇಕ ಮಾಡಿಕೊಂಡು ಕುಳಿತಿದ್ರಾ; ಸಚಿವ ಹೆಚ್.ಕೆ.ಪಾಟೀಲ್ (H.K.Patil)

[ccc_my_favorite_select_button post_id="109884"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಪ್ರಸ್ತುತ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಐಸಿಇ ದಾಳಿಗಳನ್ನು ಧಿಕ್ಕರಿಸಿ ಲಾಸ್ ಏಂಜಲೀಸ್‌ನಲ್ಲಿ ದೊಡ್ಡಮಟ್ಟದದಲ್ಲಿ ಶಾಂತಿಯುತ ಪ್ರತಿಭಟನೆ Los Angeles

[ccc_my_favorite_select_button post_id="108829"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಕೂಲ್ಡ್ರಿಂಕ್ಸ್ ಕುಡಿದಿಕ್ಕೆ ಗಂಡನ ಕಿರುಕುಳ.. ನವವಿವಾಹಿತೆ ಆತ್ಮಹತ್ಯೆ..!

ಕೂಲ್ಡ್ರಿಂಕ್ಸ್ ಕುಡಿದಿಕ್ಕೆ ಗಂಡನ ಕಿರುಕುಳ.. ನವವಿವಾಹಿತೆ ಆತ್ಮಹತ್ಯೆ..!

ಇಷ್ಟವಿಲ್ಲದ ಸಂಬಂಧಿಕರ ಜೊತೆ ತಂಪು ಪಾನೀಯ (ಕೂಲ್ಡ್ರಿಂಕ್) ಕುಡಿದಿದ್ದಕ್ಕಾಗಿ ಗಂಡ ನೀಡಿದ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ಆತ್ಮಹತ್ಯೆ (Suicide)

[ccc_my_favorite_select_button post_id="109857"]
ಜಗನ್ ಕಾರು ಚಕ್ರದಡಿ ಅಭಿಮಾನಿ ಸಾವು..!| ಆಘಾತಕಾರಿ Video ವೈರಲ್

ಜಗನ್ ಕಾರು ಚಕ್ರದಡಿ ಅಭಿಮಾನಿ ಸಾವು..!| ಆಘಾತಕಾರಿ Video ವೈರಲ್

ಅಭಿಮಾನಿಗಳು ಕೂಡ ಕಾರಿನ ಚಕ್ರದಡಿ ವೃದ್ಧರೊಬ್ಬರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ ಲೆಕ್ಕಿಸದೇ ಜಗನ್ (Jagan) ಅವರನ್ನು ಮುಟ್ಟಲು, ಹತ್ತಿರದಿಂದ ನೋಡಲು ನುಗ್ಗಿ ಬರುತ್ತಿದ್ದರು

[ccc_my_favorite_select_button post_id="109775"]

ಆರೋಗ್ಯ

ಸಿನಿಮಾ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (CET) ಫಲಿತಾಂಶ ಪ್ರಕಟಗೊಂಡಿದೆ.

[ccc_my_favorite_select_button post_id="107812"]