ದೊಡ್ಡಬಳ್ಳಾಪುರ: ತಾಲೂಕಿನ ವಿವಿಧಡೆಗಳಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
ಹಾಡೋನಹಳ್ಳಿಯಲ್ಲಿ ಮಧ್ಯರಾತ್ರಿ ಸ್ವಾತಂತ್ರ್ಯ ದಿನಾಚರಣೆ ತಾಲೂಕಿನ ಹಾಡೋನಹಳ್ಳಿ ಗ್ರಾಮದ ಪಾಠದ ಮನೆ ವತಿಯಿಂದ 74 ಸ್ವಾತಂತ್ರ್ಯ ದಿನವನ್ನು ಆ.12ರ ಮಧ್ಯರಾತ್ರಿ ಆಚರಿಸಲಾಯಿತು. ಗ್ರಾಮಸ್ಥರಾದ ಎಚ್.ಡಿ.ಸತೀಶ್ ಮಾತನಾಡಿ, ಪಾಠದ ಮನೆ ವತಿಯಿಂದ ಸುಮಾರು 22 ವರ್ಷಗಳಿಂದಲೂ ಸ್ವಾತಂತ್ರ್ಯ ದಿನವನ್ನು ಮಧ್ಯರಾತ್ರಿ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ದೇಶಕ್ಕಾಗಿ ಪ್ರಾಣತೆತ್ತ ಮಹಾತ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸಸಿಗಳನ್ನು ವಿತರಿಸಲಾಯಿತು.
ಗ್ರಾಮದ ಗುಂಡಪ್ಪ, ಪ್ರಕಾಶ್, ಎಚ್.ಆರ್.ಹರೀಶ್, ಸುನೀಲ್, ಎಚ್.ಎಂ.ಹರೀಶ್, ಅನಿಲ್, ಮನು, ಮಂಜುನಾಥ್, ರಾಹುಲ್, ನರೇಶ್, ಮದನ್, ವಿನಯ್, ಅಮರ್, ಶ್ರೀನಿವಾಸ್, ಮೋಹನ್, ನಿಖಿಲ್, ಅವಿನಾಶ್, ಹೇಮಂತ್, ರಕ್ಷಿತ್, ಸುಹಾಸ್, ವಜ್ರೇಶ್, ಸುಭಾಷ್ ಮತ್ತಿತರರಿದ್ದರು.
ನಗರದ ಕುಚ್ಚಪ್ಪನಪೇಟೆಯಲ್ಲಿ ಅರಿವು ಮಿತ್ರವೃಂದದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ರಂಗ ಕಲಾವಿದ ಕೆ.ಸಿ.ನಾರಾಯಣ್ ಧ್ವಜಾರೋಹಣ ನೆರವೇರಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ಅರಿವು ಮಿತ್ರವೃಂದದ ಪಿ.ಆರ್.ರಮೇಶ್ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲ ಪ್ರೊ.ಎನ್.ಶ್ರೀನಿವಾಸಯ್ಯ ಧ್ವಜಾರೋಹಣ ನೆರವೇರಿಸಿದರು.
ನಗರದ ಸರಸ್ವತಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಶಾಲಾ ಅಧ್ಯಕ್ಷ ಎ.ಸುಬ್ರಮಣ್ಯ ಧ್ವಜಾರೋಹಣ ನೆರವೇರಿಸಿದರು.ಕಾರ್ಯದರ್ಶಿ ಮಂಜುಳಾ, ಉಪಾಧ್ಯಕ್ಷ ಎಸ್.ಸ್ವರೂಪ್, ನಯನ ಸ್ವರೂಪ್ ಹಾಗೂ ಮುಖ್ಯೋಪಾಧ್ಯಾಯ ಬಿ.ಕೆ.ಸಂಪತ್ ಕುಮಾರ್ ಉಪಸ್ಥಿತರಿದ್ದರು.
ನಗರದ ಎಂಎಸ್ವಿ ಪಬ್ಲಿಕ್ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಪ್ರಗತಿಪರ ರೈತ ಶಿವಪ್ಪ ಧ್ವಜಾರೋಹಣ ನೆರವೇರಿಸಿದರು. ಶಾಲಾ ಅಧ್ಯಕ್ಷ ಎ.ಸುಬ್ರಮಣ್ಯ ಕಾರ್ಯದರ್ಶಿ ಮಂಜುಳಾ,ಪ್ರಾಂಶುಪಾಲರಾದ ಲೈಲಾ ಕುಮಾರಿ ಮತ್ತು ನಾಗರತ್ನ.ಎನ್.ಪಾಲನ್ ಉಪಸ್ಥಿತರಿದ್ದರು.
ದೊಡ್ಡಬಳ್ಳಾಪುರದ ಶಾಲೆ ಎಂ.ಎಸ್.ವಿ. ಪಬ್ಲಿಕ್ ಶಾಲೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಶಾಲಾ ಅಧ್ಯಕ್ಷ ಸುಬ್ರಮಣ್ಯ.ಎ.ರವರು ಧ್ವಜಾರೋಹಣ ಮಾಡಿದರು. ಸಹ ಶಿಕ್ಷಕರು ರಾಷ್ಟ್ರಗೀತೆ ಮತ್ತು ಧ್ವಜ ಗೀತೆಯನ್ನು ಹಾಡಿ ಭಾರತ ಮಾತೆಗೆ ಗೀತನಮನ ಸಲ್ಲಿಸಿದರು.
ಶಾಲೆಯ ಉಪಾಧ್ಯಕ್ಷ ಸ್ವರೂಪ್.ಎಸ್, ಶಾಲೆಯ ಪ್ರಾಂಶುಪಾಲೆ ನಾಗರತ್ನ.ಎನ್.ಪಾಲನ್ ಮತ್ತು ಸಹ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶ್ರೀ ಅರವಿಂದ ವಿದ್ಯಾಸಂಸ್ಥೆ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ಅದ್ಯಕ್ಷರು ನಗರಸಭೆಯ ನಿಕಟ ಪೂರ್ವ ಅದ್ಯಕ್ಷ ಟಿ.ಎನ್.ಪ್ರಭುದೇವ್ ರವರು ದ್ವಜಾರೋಹಣ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿ ಗಳಾದ ಡಿ.ಕೆ.ವೆಂಕಪ್ಪ. ಪ್ರಾಂಶುಪಾಲ ಎಂ.ಸಿ.ಮಂಜುನಾಥ. ಅರವಿಂದ ಕನ್ನಡ ಶಾಲೆಯ ಮುಖ್ಯ ಶಿಕ್ಷಕಿ ಆಶ್ರಪಉನ್ನಿಸಾ .ಆಂಗ್ಲಶಾಲೆಯ ಮುಖ್ಯ ಶಿಕ್ಷಕಿ ಫರೀದಾ ದೈಹಿಕ ಶಿಕ್ಷಣ ವಿಬಾಗದ.ಮುಖ್ಯಸ್ಥ ವಸಂತ ರಾಜ.ತುಳಸಿ ವೈ.ಎನ್ ಅನೀತಾ ಹಾಗೂ ಉಪನ್ಯಾಸಕರು ಶಿಕ್ಷಕರು ಭಾಗವಹಿಸಿದ್ದರು.
ತಾಲೂಕಿನ ಮೆಳೇಕೋಟೆ ಕ್ರಾಸಿನ ಎಸ್.ಜೆ.ಸಿ.ಆರ್. ವಿದ್ಯಾನಿಕೇತನ, ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಅಪ್ಪಯ್ಯಣ್ಣ ಭಾಗವಹಿಸಿದ್ದರು.
ಬಿ.ಡಿ.ಸಿ.ಸಿ ಬ್ಯಾಂಕ್ನ ನಿರ್ದೇಶಕ ವೆಂಕಟೇಶ್ಬಾಬು,ಮುಖಂಡರಾದ ಆನಂದ್, ಕೃಷ್ಣಪ್ಪ, ಕೃಷ್ಣಮೂರ್ತಿ, ನಾಗೇಶ್, ಮುಖ್ಯೋಪಾಧ್ಯಾಯರಾದ ಹೆಚ್. ಎಲ್. ವಿಜಯಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಮಯಾಂಕ್.ಕೆ ಹಾಗೂ ಅಮೂಲ್ಯ.ಎ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ತಾ.ಕಸಾಪದಿಂದ ಸ್ವಾತಂತ್ರ್ಯ ದಿನಾಚರಣೆ :ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ವತಿಯಿಂದ 74 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ದೊಡ್ಡಬಳ್ಳಾಪುರ ನಗರಸಭೆಯ ಪೌರಕಾರ್ಮಿಕರಾದ ಆರ್.ಕುಮಾರ್ , ಅಂಗನವಾಡಿ ನೌಕರರ ತಾಲ್ಲೂಕು ಅಧ್ಯಕ್ಷೆ ಮಂಜುಳ ಶ್ರೀನಿವಾಸ್ ಹಾಗೂ ತಾಲ್ಲೂಕು ಆಶಾ ಕಾರ್ಯಕರ್ತರ ಅಧ್ಯಕ್ಷೆ ಲಕ್ಷ್ಮೀದೇವಿ ಅವರು ಧ್ವಜಾರೋಹಣ ನೆರವೇರಿಸಿದರು.
ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ನ ನಿರ್ದೇಶಕರಾದ ರಜ್ ಮುನಿರಾಜು ಅಧ್ಯಕ್ಷತೆ ವಹಿಸಿದ್ದರು.ಸಮಾರಂಭದಲ್ಲಿ ಹೊನ್ನಸಿರಿ ಫೌಂಡೇಶನ್ನ ರಾಜ್ಯಾಧ್ಯಕ್ಷ ಎಚ್.ಆರ್.ನಾಗಭೂಷಣ್ ಹಿರಿಯ ಪತ್ರಕರ್ತ ರಾಜೇಂದ್ರ ಕುಮಾರ್, ತಾಲೂಕು ಕಸಾಪ ಅಧ್ಯಕ್ಷೆ ಪ್ರಮೀಳಮಹಾದೇವ್ ದೊಡ್ಡಬಳ್ಳಾಪುರ ಯೋಜನಾ ಪ್ರಾಕಾರದ ನಿರ್ದೇಶಕ ಎನ.ಕೆ.ರಮೇಶ್, ಹೊನ್ನಸಿರಿ ಫೌಂಡೇಶನ್ ನ ಜಿಧ್ಯಕ್ಷ ಟಿ.ಎಲ.ವೆಂಕಟೇಶ್ ತಾ.ಕಸಾಪ ಸ್ಥಾಪಕ ಕಾರ್ಯದರ್ಶಿ ಎಂ.ಇ.ಖಲೀಲುಖಾನ್ , ಕಾರ್ಯಾಧ್ಯಕ್ಷ, ತರಿದಾಳ್ ಶ್ರೀನಿವಾಸ್ , ಗೌ ಕಾರ್ಯದರ್ಶಿಗಳಾದ ವಿ.ಸಿ.ಜ್ಯೋತಿ ಕುಮಾರ್ ಹಾಗೂ ಡಿ.ಈ.ಶಿವಕುಮಾರ್ ಕೋಶಾಧ್ಯಕ್ಷರಾದ ನಿರ್ಮಲರಮೇಶ್ , ನಗರಸಭೆಯ ಪರಿಸರ ಅಭಿಯಂತರರಾದ ಈರಣ್ಣ ಮತ್ತಿತರರು ಭಾಗವಹಿಸಿದ್ದರು.