ದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ತನಿಖೆಯನ್ನು ಸಿಬಿಐಗೆ ಹಸ್ತಾರಿಸುವಂತೆ ಮುಂಬೈ ಪೊಲೀಸರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಸುಶಾಂತ್ ಸಿಂಗ್ ಮಾಜಿ ಗೆಳತಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಹೃಷಿಕೇಶ್ ನೇತೃತ್ವದ ಪೀಠ ಅರ್ಜಿ ವಜಾಗೊಳಿಸಿ ಈ ಮಹತ್ವದ ತೀರ್ಪು ನೀಡಿದೆ.
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ನೋಂದಾಯಿಸಲಾದ ಇತರ ಎಫ್ಐಆರ್ ಅನ್ನು ಸಹ ಸಿಬಿಐ ತನಿಖೆ ಮಾಡುತ್ತದೆ ಎಂದು ಹೇಳಿರುವ ನ್ಯಾಯಾಲಯ. ಸುಶಾಂತ್‌ಸಿಂಗ್‌ರಾಜ್‌ಪುತ್ ಒಬ್ಬ ಪ್ರತಿಭಾವಂತ ನಟ ಮತ್ತು ಅವರ ಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವ ಮೊದಲೇ ನಿಧನರಾದರು. ತನಿಖೆಯ ಫಲಿತಾಂಶಕ್ಕಾಗಿ ಹಲವರು ತೀವ್ರವಾಗಿ ಕಾಯುತ್ತಿದ್ದಾರೆ ಆದ್ದರಿಂದ ulations ಉಹಾಪೋಹಗಳಿಗೆ ಕಡಿವಾಣ ಹಾಕಬಹುದು.ಆದ್ದರಿಂದ ನ್ಯಾಯಯುತ, ಸಮರ್ಥ,ನಿಷ್ಪಕ್ಷಪಾತ ತನಿಖೆ ಸಮಯದ ಅಗತ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಉಳಿದಂತೆ ನ್ಯಾಯಾಲಯದ ಆದೇಶವನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್,ನಟಿ ಕಂಗನಾ ಆದಿಯಾಗಿ ಬಹುತೇಕರು ಸ್ವಾಗತಿಸಿದ್ದು, ನ್ಯಾಯ ಬೇಗ ಸಿಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.