ದೊಡ್ಡಬಳ್ಳಾಪುರ: ವಿಶ್ವದ 10 ಪ್ರಖ್ಯಾತ ಛಾಯಾಗ್ರಹಕರಲ್ಲಿ 8 ಮಂದಿ ಕರ್ನಾಟಕದವರಾಗಿರುವುದು ನಮ್ಮ ರಾಜ್ಯದ ಹೆಮ್ಮೆ ಎಂದು ಕೆಪಿಎ ನಿರ್ದೆಶಕ ನಾಗೇಶ್ ತಿಳಿಸಿದರು.
ನಗರದ ಟಿಬಿ ವೃತ್ತದ ಬಳಿಯಿರುವ ದೊಡ್ಡಬಳ್ಳಾಪುರ ತಾಲೂಕು ಪೊಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ 181ನೇ ವಿಶ್ವ ಛಾಯಾಗ್ರಹಣ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಛಾಯಾಗ್ರಹಣ ಕ್ಷೇತ್ರದಲ್ಲಿ ಹಲವು ತೊಡರುಗಳ ನಡುವೆಯೂ ಛಾಯಾಗ್ರಾಹಕರು ಕರ್ನಾಟಕದ ಕೀರ್ತಿ ವಿಶ್ವಮಟ್ಟದಲ್ಲಿ ಸಾರುತ್ತಿದ್ದಾರೆ.ಆದರೂ ಸರ್ಕಾರ ಛಾಯಾಗ್ರಾಹಕರ ಗುರುತಿಸುತ್ತಿಲ್ಲ. ಕರೊನಾ ಸೋಂಕಿನ ಕಾರಣ ಘೋಷಿಸಲಾದ ಲಾಕ್‌ಡೌನ್ ಸಂದರ್ಭದಲ್ಲಿ ಇತರ ಕ್ಷೇತ್ರಗಳಂತೆ ಛಾಯಾಗ್ರಹಣ ಕ್ಷೇತ್ರ ತೀವ್ರ ಸಂಕಷ್ಟ ಅನುಭವಿಸಿತು.ಆದರೂ,ಸರ್ಕಾರ ಛಾಯಾಗ್ರಾಹಕರ ನೆರವಿಗೆ ಬಾರದಿರುವುದು ಬೇಸರದ ಸಂಗತಿ ಎಂದರು.
ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ,ಕರೊನಾ ಸಂಕಷ್ಟಕ್ಕೆ ಒಳಗಾದ ತಾಲೂಕಿನ ಛಾಯಾಗ್ರಾಹಕರಿಗೆ ಸಂಘದಿಂದ ಸಾಧ್ಯವಾದಷ್ಟು ನೆರವನ್ನು ನೀಡಿದ್ದು,ನೆರವಿಗಾಗಿ ಸರ್ಕಾರಕ್ಕು ಮನವಿ ಸಲ್ಲಿಸಲಾಗಿದೆ,ಸಂಘದಿಂದ 2020-21ನೇ ಸಾಲಿನಲ್ಲಿ ಛಾಯಸಂಭ್ರಮ ಕಾರ್ಯಕ್ರಮ ಆಯೋಜಿಸಲು ಸಿದ್ದತೆ ನಡೆಸುತ್ತಿದ್ದು,ಛಾಯಾಗ್ರಾಹಕರಿಗೆ ಅನುಕೂಲವಾಗಲಿದೆ ಎಂದರು.
ಈ ವೇಳೆ ರಾಜ್ಯ ಉಪಾಧ್ಯಕ್ಷ ಬಿ.ಎನ್.ರವಿಕುಮಾರ್,ಮಾಜಿ ಅಧ್ಯಕ್ಷರಾದ ಸಂಪತ್ ಕುಮಾರ್,ಜಿ.ರಾಜು,ಉಪಾಧ್ಯಕ್ಷ ನಿರಂಜನ್,ಕಾರ್ಯದರ್ಶಿ ಅರುಣ್ ಕುಮಾರ್,ಖಜಾಂಚಿ ಗುರುಶಂಕರಾಚಾರ್,ಸದಸ್ಯರಾದ ರವಿಕುಮಾರ್, ಲೋಕೇಶ್, ರಾಮು, ಶಿವು,ಶಿವಕುಮಾರ್, ರಾಮಲಿಂಗಮೂರ್ತಿ,ಮಂಜುನಾಥ್, ರಾಜು, ಗೋಪಿ, ಬಾಬು ಮತ್ತಿತರಿದ್ದರು.