ಮಂಡ್ಯ: ಕೆಆರ್ಎಸ್ ಜಲಾಶಯಕ್ಕೆಇಂದು ಸಿಎಂ ಬಿಎಸ್ ಯಡಿಯೂರಪ್ಪ ಬಾಗಿನ ಅರ್ಪಿಸಿದ್ದಾರೆ.
ಸತತ 5 ಬಾರಿ ಸಿಎಂ ಬಿಎಸ್ವೈ ಕಾವೇರಿ ನದಿಗೆ ಬಾಗಿನ ಅರ್ಪಿಸಿದ್ದಾರೆ. ಇದರೊಂದಿಗೆ ಕಾವೇರಿ ನದಿಗೆ ಅತೀ
ಹೆಚ್ಚು ಸಲ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.
ಅರ್ಚಕ ಡಾ.ಭಾನು ಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಬಾಗೀನಕ್ಕೆ ಪೂಜೆ ಮಾಡಲಾಯಿತು. ಕಳೆದ ವರ್ಷವೂ ಆಗಸ್ಟ್ 21ರಂದು ಕೆಆರ್ಎಸ್ ಜಲಾಶಯ ಭರ್ತಿಯಾಗಿತ್ತು.ಆಗ ಸಿಎಂ ಬಿಎಸ್ ಯಡಿಯೂರಪ್ಪ ಕಾವೇರಿ ತಾಯಿಗೆ ಬಾಗಿನ ಅರ್ಪಣೆ ಮಾಡಿದ್ದರು.
ಈ ವೇಳೆ ಸಂಸದೆ ಸುಮಲತಾ, ಸಚಿವ ರಮೇಶ್ ಜಾರಕಿ ಹೋಳಿ, ಶಾಸಕ ರವೀಂದ್ರ ಶ್ರೀಕಂಠಯ್ಯ, ಎಂಎಲ್ಸಿ ಶ್ರೀಕಂಠೇಗೌಡ, ಸಚಿವರಾದ ಸೋಮಶೇಖರ್, ನಾರಾಯಗೌಡ, ಸಂಸದ ಪ್ರತಾಪ್ ಸಿಂಹ, ಶಾಸಕ ಪುಟ್ಟರಾಜು, ಶ್ರೀನಿವಾಸ್ ಹಾಗೂ ಎಂಎಲ್ಸಿ ಅಪ್ಪಾಜಿಗೌಡ ಭಾಗಿಯಾಗಿದ್ದರು.