ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪುತ್ರ ವಿನೀಶ್ ಜೊತೆ ಚಿಕ್ಕ ಗಣೇಶನ ವಿಗ್ರಹವನ್ನು ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಈ ಫೋಟೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದು, ಪರಿಸರ ಸ್ನೇಹಿ ಗಣೇಶನ ಬಳಕೆಗೆ ಬೆಂಬಲ ಸೂಚಿಸಿದ್ದಾರೆ.
ವಿಜಯಲಕ್ಷ್ಮಿ ಸ್ವತಃ ತಾವೇ ತಯಾರಿಸುವ ಗಣೇಶನನ್ನು ತಮ್ಮ ಮನೆಯಲ್ಲಿ ಕೂರಿಸಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಸುಂದರವಾದ ಗಣೇಶ ಮೂರ್ತಿಯನ್ನು ತಯಾರಿಸಲು ಸುಲಭವಿದ್ದಾಗ ಏಕೆ ಖರೀದಿಸಬೇಕು ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ನಾಳಿನ ಆರೋಗ್ಯಕ್ಕಾಗಿ ಇಂದು ಪರಿಸರ ಸ್ನೇಹಿ ಗಣೇಶ ಬಳಸುವುದು ಉತ್ತಮ ಎಂದು ಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ.