ದೊಡ್ಡಬಳ್ಳಾಪುರ: ನಗರದ ಮಹಾವೀರ್ ಜೈನ್ ಶ್ವೇತಾಂಬರ ಮಂದಿರದಲ್ಲಿ ಪರ್ವ ಪ್ರಜೂಷನ ವ್ಯತಾಚರಣೆ ಶ್ರದ್ಧಾ ಭಕ್ತಿಗಳಿಂದ ನೆರವೇರಿತು.
ಶ್ರಾವಣ ಮಾಸದ ಏಕಾದಶಿಯಿಂದ ಭಾದ್ರಪದ ಮಾಸದ ಚತುರ್ಥಿಯವರೆಗೆ ನಡೆಯಲಿರುವ ಈ ಆಚರಣೆಯನ್ನು ಈ ಬಾರಿ ಕೊವಿಡ್-19 ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಯಿತು.
ನಿತ್ಯ 2 ಬಾರಿ ಪೂಜೆ, ಪಠಣ ಸಾಮಾಜಿಕ ಅಂತರದೊಂದಿಗೆ ಜೈನ ಆಚಾರ್‍ಯ ಚಂದ್ರಜೀತ್ ಅವರ ಪ್ರವಚನ ವಾಣಿಯನ್ನು ಭಕ್ತಾದಿಗಳಿಗೆ ಮುಟ್ಟಿಸಲಾಯಿತು.
ಅಹಿಂಸೆ ಪಾಲನೆ, ಸಾಧನೆ ಭಕ್ತಿ, ಪರಸ್ಪರ ಕ್ಷಮೆ, ಸಂಕಷ್ಟದಲ್ಲಿರುವವರಿಗೆ ಸಹಾಯ, ಉಪವಾಸ ವ್ರತ,ಜೀವ ದಯೆ ಪರಮಾತ್ಮನ ಭಕ್ತಿಯೆಂಬ ಕರ್ತವ್ಯಗಳನ್ನು ಪಾಲಿಸಲಾಗುತ್ತದೆ.
ಕ್ರೋಧವೆಂಬ ಕಷಾಯವನ್ನು,ಕೋಪ ತಾಪವನ್ನು,ಒರಟುತನವನ್ನು ಬಿಟ್ಟು ಸರಳ, ಸಭ್ಯ, ಸಾತ್ವಿಕನಾಗಿ ಬಾಳುವುದೇ ಕ್ಷಮಾ ಧರ್ಮ. ಕ್ಷಮೆಯು ಅಂತರಂಗದ ಸ್ವಭಾವ. ಅಹಿಂಸೆಯ ಹೆಗ್ಗುರುತು. ಇಂತಹ ಸೌಮ್ಯ ಗುಣವನ್ನು ಬೆಳೆಸಿಕೊಡು ಬಾಳುವುದೇ ಉತ್ತಮ ಧರ್ಮವಾಗಿದೆ ಎನ್ನುವ ಆಚಾರ್ಯರ ವಾಣಿಯನ್ನು ಪಾಲಿಸಲಾಗುತ್ತದೆ ಎಂದು ಜೈನ ಸಮುದಾಯದ ಹಿರಿಯರು ತಿಳಿಸಿದ್ದಾರೆ.