ಮಣ್ಣಿನ ಆರೋಗ್ಯವನ್ನು ಮಕ್ಕಳಂತೆ ಜೋಪಾನವಾಗಿ ನೋಡಿಕೊಳ್ಳಬೇಕು

ದೊಡ್ಡಬಳ್ಳಾಪುರ: ಮಣ್ಣನ್ನು ಮಕ್ಕಳಂತೆ ಜೋಪಾನವಾಗಿ ನೋಡಿಕೊಳ್ಳದೆ ಇದ್ದರೆ ಅದು ಬೆಳೆಗಳ ಮೇಲಷ್ಟೇ ಪರಿಣಾಮ ಬೀರುವುದಿಲ್ಲ. ನಮ್ಮ ಆರೋಗ್ಯದ ಮೇಲೂ ಕೆಟ್ಟಪರಿಣಾಮ ಬೀರಲಿದೆ ಎಂದು ಸಾಯಿಲ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ವಾಸು ಹೇಳಿದರು.

ಅವರು ತಾಲ್ಲೂಕಿನ ನಾಗಸಂದ್ರ ಗ್ರಾಮದ ಮುದ್ದಪ್ಪ ಅವರ ತೋಟದಲ್ಲಿ ಯುವ ಸಂಚಲನ ವತಿಯಿಂದ ನಡೆದ ಕಳೆ ಹಾಗೂ ಬೆಳೆ ಕುರಿತದಾದ ಕಾರ್ಯಗಾರದಲ್ಲಿ ಮಾತನಾಡಿದರು.

ಮಣ್ಣಿನ ಆರೋಗ್ಯ ಸರಿಯಾಗಿ ಇಲ್ಲದೇ ಇರುವುದೇ ಮನುಷ್ಯನ ಆರೋಗ್ಯವು ಹಾಳಾಗಲು ಕಾರಣವಾಗಿದೆ. ಮಣ್ಣಿನ ಆರೋಗ್ಯ ಸರಿಹೋಗದೆ ಮನುಷ್ಯನ ಆರೋಗ್ಯ ಸರಿಯಾಗುವುದಿಲ್ಲ. ಯಾವುದೇ ರೀತಿಯ ಔಷಧಿ ನೀಡಿದರು ಸಹ ಅದು ತಾತ್ಕಾಲಿನ ಶಮನಷ್ಟೇ ವಿನಹ ಶಾಶ್ವತ ಪರಿಹಾರ ಆಗುವುದಿಲ್ಲ. ಹಸಿರು  ಕ್ರಾಂತಿ ದೇಶದ ಜನರ ಹಸಿವು ನೀಗಿಸಿದೆ ಎನ್ನಲಾಗುತ್ತದೆ. ಆದರೆ ಅದೇ ಸಂದರ್ಭದಲ್ಲಿ ಶತಮಾನಗಳ ಕಾಲದಿಂದ ಆರೋಗ್ಯಕರವಾಗಿದ್ದ ಮಣ್ಣಿಗೆ ಅಳತೆಯೇ ಇಲ್ಲದಂತೆ ರಾಸಾಯನಿಕ ಗೊಬ್ಬರಗಳನ್ನು ಸುರಿದು  ಫಲವತ್ತತೆಯನ್ನು ಹಾಳುಮಾಡಲಾಗಿದೆ. ಮತ್ತೆ ಮಣ್ಣಿನ ಆರೋಗ್ಯ ಸರಿ ಮಾಡಬೇಕಾದರೆ ದಶಕಗಳೇ ಬೇಕಾಗಲಿದೆ ಎಂದು ಹೇಳಿದರು.

ಕಳೆ ಗಿಡಗಳ ಬಗ್ಗೆ ರೈತರಿಗೆ ತಪ್ಪು ಮಾಹಿತಿ ಹಾಗೂ ವಿನಾಕಾರಣ ಭಯಪಡುವಂತೆ ಮಾಡುವ ಮೂಲಕ ರಾಸಾಯನಿಕ ಕಂಪನಿಗಳು ಲಾಭ ಮಾಡುತ್ತಿವೆ. ಯಾವತ್ತು ಸಹ ಮುಖ್ಯ ಬೆಳೆಗೆ ಕಳೆಗಿಡಗಳು ತೊಂದರೆಯುಂಟು ಮಾಡುವುದಿಲ್ಲ.ಆದರೆ ಅವುಗಳನ್ನು ಸಾಂಪ್ರದಾಯಿಕ ವಿಧಾನಗಳ ಮೂಲಕ ನಿಯಂತ್ರಿಸುವ ಕ್ರಮಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕಿದೆ. ಹಿರಿಯ ತಲೆಮಾರಿನ ರೈತರು ಎಂದೂ ಸಹ ರಾಗಿ ಬೆಳೆಗೆ ಕಳೆ ಅಡ್ಡಿಯುಂಟು ಮಾಡಿದ್ದರಿಂದ ಬೆಳೆ ಹಾಳಾಯಿತು, ಇಳುವರಿ ಕುಂಟಿತವಾಯಿತು ಎನ್ನುವ ಮಾತುಗಳನ್ನು ಹೇಳುವುದು ತೀರ ಕಡಿಮೆ ಎಂದರು.  

ಬೆಳೆಗೆ ಅಗತ್ಯ ಇರುವ 16 ಪೋಷಕಾಂಶಗಳು ಮಣ್ಣಿನಲ್ಲಿ ಶೇಖರಣೆಯಾಗಲು, ವೃದ್ಧಿಸಲು ಕಳೆ ಗಿಡಗಳು ನಮ್ಮ ಕಣ್ಣಿಗೆ ಕಾಣದಂತೆ ಸಾಕಷ್ಟು ಉಪಯುಕ್ತ ಕೆಲಸಗಳನ್ನು ಮಾಡುತ್ತವೆ. ಕಳೆಗಿಡಗಳ ಕಾರ್ಯಚಟುವಟಿಕೆಗಳನ್ನೂ ರೈತರು ತಿಳಿದುಕೊಳ್ಳಬೇಕು. ಬರೀ ಮುಖ್ಯ ಬೆಳೆಯಕಡೆಗಷ್ಟೇ ನಮ್ಮ ಗಮನ ಇರುತ್ತದೆ. ಮಣ್ಣಿಗೆ ಆರೋಗ್ಯ, ಫಲವತ್ತತೆ, ಮಣ್ಣಿನ ಆಳಕ್ಕೆ ನೀರು ಇಳಿಯಲು ಬಹುಮುಖ್ಯವಾಗಿ ಕೆಲಸ ಮಾಡುವುದೇ ಕಳೆಗಿಡಗಳು ಎಂದರು.

ಮುಖ್ಯಬೆಳೆಗೆ ಬರುವ ಕೀಟ,ರೋಗಗಳ ನಿಯಂತ್ರಣದಲ್ಲೂ ಕಳೆಗಿಡಗಳ ಪಾತ್ರವು ಮಹತ್ವದ್ದಾಗಿದೆ. ಮುಖ್ಯಬೆಳೆಯ ಬೇರುಗಳು ಮಣ್ಣಿನ ಆಳಕ್ಕೆ ಇಳಿದು ಪೋಷಕಾಂಶಗಳನ್ನು ಪಡೆಯಲು ಕಳೆಗಿಡಗಳು ಸಹಕಾರಿಯಾಗಿವೆ. ಕಳೆ ನಾಶಕ ಔಷಧಿಯನ್ನು ಸಿಂಪರಣೆ ಮಾಡುವುದರಿಂದ ಮಣ್ಣಿನ ಆರೋಗ್ಯದೊಂದಿಗೆ ಮನುಷ್ಯರ ಆರೋಗ್ಯದ ಮೇಲೂ ಕೆಟ್ಟಪರಿಣಾಮ ಬೀರುತ್ತದೆ. ಮಣ್ಣಿನಲ್ಲಿನ ಸೂಕ್ಷ್ಮಾಣು ಜೀವಿಗಳು ಸಾಯುವುದಲ್ಲದೆ ಕೆರೆ, ಕುಂಟೆಗಳಲ್ಲಿನ ಜಲಚರಗಳ ಆಹಾರ ಸರಪಳಿಯು ನಾಶವಾಗಲಿದೆ. ನಿಸರ್ಗದತ್ತವಾದ ಆಹಾರ ಸರಪಣಿ ನಾಶವಾದರೆ ಕೊರೊನಾ ವೈರಸ್ಗಿಂತಲು ದೊಡ್ಡ ವೈರಸ್ ಬೆಳೆವಣಿಗೆ ಮತ್ತು ಹಾವಳಿಗೆ ನಾವಾಗಿಯೇ ದಾರಿಮಾಡಿಕೊಟ್ಟಂತಾಗಲಿದೆ ಎಂದು ಎಚ್ಚರಿಸಿದರು.  

ಕಾರ್ಯಾಗಾರದ ಆಯೋಜಕ ಯುವ ಸಂಚಲದ ಅಧ್ಯಕ್ಷ ಚಿದಾನಂದ್ ಮಾತನಾಡಿ, ಮಣ್ಣಿನ ಆರೋಗ್ಯದಲ್ಲಿ ಬಹು ಬೆಳೆ ಪದ್ದತಿಯ ಪಾತ್ರವು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ರಾಗಿ ಸೇರಿದಂತೆ ಮತ್ತಿತರೆ ಬೆಳೆಗಳ ಮಧ್ಯದಲ್ಲಿ ಅಕ್ಕಡಿ ಸಾಲುಗಳ ಮಹತ್ವ ಮತ್ತು ಅಕ್ಕಡಿ ಪದ್ದತಿಯನ್ನು ಮತ್ತೆ ರೈತರು ಅನುಸರಿಸುವಂತೆ ಮಾಡಲು ಪ್ರಯತ್ನಿಸಲಾಗುವುದು. ಬಯಲು ಸೀಮೆ ಜಿಲ್ಲೆಗಳಲ್ಲಿ ಮಳೆ ಆಶ್ರಯದಲ್ಲಿ ಮುಂಗಾರು ಬೆಳೆ ಬೆಳೆಯುವುದನ್ನು ಮಾತ್ರ ಇತ್ತೀಚಿನ ದಿನಗಳಲ್ಲಿ ಕಾಣುತಿದ್ದೇವೆ. ಆದರೆ ಹಿಂಗಾರು ಬೆಳೆಯ ಕಡೆಗೆ ಮಳೆ ಆಶ್ರಯದ ರೈತರು ಅಷ್ಟಾಗಿ ಆಸಕ್ತಿಯನ್ನೇ ತೋರುತ್ತಿಲ್ಲ. ಹಿಂಗಾರು ಬೆಳೆ ಬೆಳೆಯುವ ಬಗ್ಗೆಯು ರೈತರಲ್ಲಿ ಆಸಕ್ತಿ ಮೂಡಿಸಿ ಬೆಳೆ, ತಳಿಗಳ ಆಯ್ಕೆ ಕುರಿತಂತೆ ಜಾಗೃತಿ ಮೂಡಿಸಲಾಗುವುದು. ಕೆಲ ರೈತರು ಈಗಾಗಲೇ ಆಸಕ್ತಿ ತೋರಿ ಈ ವರ್ಷದ ಹಿಂಗಾರಿನಲ್ಲೆ ಬೆಳೆ ಬೆಳೆಯಲು ಮುಂದೆ ಬಂದಿದ್ದಾರೆ. ಮುಂಗಾರಿನಷ್ಟೇ ಇಳುವರಿಯನ್ನು ಹಿಂಗಾರಿನ ಬೆಳೆಗಳಲ್ಲು ಪಡೆಯಲು ಸಾಕಷ್ಟು ಅವಕಾಶಗಳು ಇವೆ. ನಮ್ಮ ಹಿರಿಯರು ಮುಂಗಾರು, ಹಿಂಗಾರು ಎರಡೂ ಬೆಳೆಗಳಿಗು ಸಮಾನವಾದ ಪ್ರಾಮುಖ್ಯತೆ ನೀಡುತ್ತಿದ್ದ ಉದಾಹರಣೆಗಳು ಇವೆ ಎಂದರು.      

ಕಾರ್ಯಾಗಾರದಲ್ಲಿ ಪ್ರಗತಿಪರ ರೈತರಾದ ಬಚ್ಚಹಳ್ಳಿ ಸತೀಶ್, ಗಂಗಮುತ್ತಯ್ಯ, ಶ್ರವಣೂರು ರೋಹಿತ್, ಲಕ್ಷ್ಮೀದೇವಪುರ ನರಸಿಂಹರಾವ್, ಮಾಗಡಿ ತಾಲ್ಲೂಕಿನ ದೊಡ್ಡರಂಗಯ್ಯನಪಾಳ ಗ್ರಾಮದ ಕೃಷ್ಣಮೂರ್ತಿ, ಗಂಗಾಧರ್, ಯುವ ಸಂಚಲನದ ಸತೀಶ್ಕುಮಾರ್, ದಿವಾಕರ್ನಾಗ್, ಏಟ್ರಿಯ ಸಂಸ್ಥೆಯ ಮಂಜುನಾಥ್ ಇದ್ದರು.

ರಾಜಕೀಯ

ಜನರೊಂದಿಗೆ ಜನತಾದಳ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿದ ಜೆಡಿಎಸ್

ಜನರೊಂದಿಗೆ ಜನತಾದಳ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿದ ಜೆಡಿಎಸ್

ಜೆಡಿಎಸ್ (JDS) ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ನಾಳೆಯಿಂದ (ಜೂನ್‌ 16) ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಸೋಮವಾರ ತುಮಕೂರು ಜಿಲ್ಲೆಯಿಂದ ಅಧಿಕೃತ ಆರಂಭ..

[ccc_my_favorite_select_button post_id="109279"]
RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಆರ್ ಅಶೋಕ ಪತ್ರ

RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಆರ್ ಅಶೋಕ

IPL ಕಪ್ ಗೆದ್ದ RCB ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಅನಾಹುತ ತಡೆಯಬಹುದಾದ ದುರಂತವಾಗಿತ್ತು ತುರ್ತು ಮಧ್ಯಸ್ಥಿಕೆ

[ccc_my_favorite_select_button post_id="109057"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಪ್ರಸ್ತುತ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಐಸಿಇ ದಾಳಿಗಳನ್ನು ಧಿಕ್ಕರಿಸಿ ಲಾಸ್ ಏಂಜಲೀಸ್‌ನಲ್ಲಿ ದೊಡ್ಡಮಟ್ಟದದಲ್ಲಿ ಶಾಂತಿಯುತ ಪ್ರತಿಭಟನೆ Los Angeles

[ccc_my_favorite_select_button post_id="108829"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ದೊಡ್ಡಬಳ್ಳಾಪುರ: ಕೊಲೆಯಲ್ಲಿ ಅಂತ್ಯವಾದ ಸ್ನೇಹಿತರ ಜಗಳ..!

ದೊಡ್ಡಬಳ್ಳಾಪುರ: ಕೊಲೆಯಲ್ಲಿ ಅಂತ್ಯವಾದ ಸ್ನೇಹಿತರ ಜಗಳ..!

ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಗೆಳೆಯರ ನಡುವೆ ಕ್ಷುಲಕ ಕಾರಣಕ್ಕಾಗಿ ಭಾನುವಾರ ನಡೆದ ಜಗಳ ಕೊಲೆಯಲ್ಲಿ (Murder)

[ccc_my_favorite_select_button post_id="109284"]
ದೊಡ್ಡಬಳ್ಳಾಪುರ: ಕಾರು ಡಿಕ್ಕಿ.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

ದೊಡ್ಡಬಳ್ಳಾಪುರ: ಕಾರು ಡಿಕ್ಕಿ.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

ರಸ್ತೆ ಬದಿ ಸಾಗುತ್ತಿದ್ದವರಿಗೆ ಡಿಕ್ಕಿ ಹೊಡೆದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಟ್ರಂಚ್‌ಗೆ ಡಿಕ್ಕಿ ಹೊಡೆದ ಅಪಘಾತದಲ್ಲಿ (Accident)

[ccc_my_favorite_select_button post_id="109282"]

ಆರೋಗ್ಯ

ಸಿನಿಮಾ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (CET) ಫಲಿತಾಂಶ ಪ್ರಕಟಗೊಂಡಿದೆ.

[ccc_my_favorite_select_button post_id="107812"]