ದೊಡ್ಡಬಳ್ಳಾಪುರ: ಒಂದೇ ದಿನಾ ಕರೊನಾ ಸೋಂಕಿತ 71 ಮಂದಿ ಕರೊನಾ ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿರುವ ಶುಭಸುದ್ದಿಯ ಜೊತೆಯಲ್ಲಿಯೇ,ಇಂದು ಸಹ ಓರ್ವ ಸೋಂಕಿತ ವ್ಯಕ್ತಿ ಸಾವನಪ್ಪುವ ಮೂಲಕ ದಿನೇ ದಿನೆ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವ ವರದಿ ತಾಲೂಕಿನ ಹೆಲ್ತ್ ಬುಲೆಟಿನ್ ನಲ್ಲಿ ಕಂಡು ಬಂದಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ್ ಅನ್ವಯ, ಮಂಗಳವಾರದ ಸಂಜೆಯ ವರಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಗಡ್ಡಂಬಚ್ಚಹಳ್ಳಿಯ 40 ವರ್ಷದ ಪುರುಷ ತೀವ್ರ ಶ್ವಾಸಕೋಶ ಸೋಂಕಿನಿಂದ ಸಾವನಪ್ಪಿರುವ ಜೊತೆಗೆ,16 ಮಂದಿ ಪುರುಷರು ಹಾಗೂ ಏಳು ಜನ ಮಹಿಳೆ ಸೇರಿ ಇಪ್ಪತ್ಮೂರು ಜನರಿಗೆ ಕರೊನಾ ಸೋಂಕು ದೃಡಪಟ್ಟಿದ್ದರೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ. ನೆಲ್ಲುಕುಂಟೆ, ರೈಲ್ವೇ ಸ್ಟೇಷನ್ ತಲಾ ಮೂರು, ಚೈತನ್ಯನಗರ, ಬಾಶೆಟ್ಟಿಹಳ್ಳಿ, ರಘುನಾಥಪುರ ತಲಾ ಒಂದು ಹಾಗೂ ಮಜರಾಹೊಸಹಳ್ಳಿ ವಸತಿ ಶಾಲೆ, ಮಜರಾಹೊಸಹಳ್ಳಿ ಮಹಿಳೆಯರ ವಸತಿಗೃಹ, ಬ್ಯಾಂಕ್ ಸರ್ಕಲ್, ಚೌಡೇಶ್ವರಿ ದೇವಸ್ಥಾನದ ರಸ್ತೆ, ಲಾವಣ್ಯ ಶಾಲೆ ಹಿಂಬಾಗ, ಮಾರುತಿ ನಗರ, ಶ್ರೀ ನಗರ, ವನ್ನಿಗರಪೇಟೆ, ಕುರುಬರಹಳ್ಳಿಯ ಕಾವೇರಿ ಬಡಾವಣೆ, ರೋಜಿಪುರ ಮತ್ತು ತ್ಯಾಗರಾಜನಗರದಲ್ಲಿ ತಲಾ ಒಬ್ಬರಲ್ಲಿ ಸೊಂಕು ದೃಡಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 921 ಮಂದಿಗೆ ಸೋಂಕು ತಗುಲಿದ್ದು, 652 ಮಂದಿ ಗುಣಮುಖರಾಗಿದ್ದರೆ 25 ಮಂದಿ ಸಾವನಪ್ಪಿದ್ದಾರೆ. ಸೋಂಕಿಗೆ ಒಳಗಾದ 36 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 208 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರ ಹಾಗೂ ಕೆಂಗೇರಿಯ ಮಹಾವೀರ್ ಜೈನ್ ವಿದ್ಯಾರ್ಥಿ ನಿಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.