ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಇಂದು 67 ಮಂದಿಗೆ ಕರೊನಾ ಸೋಂಕು ದೃಢ ಪಡುವ ಮೂಲಕ ಸೋಂಕಿತರ ಸಂಖ್ಯೆ ಒಂದು ಸಾವಿರದ ಇಪ್ಪತ್ಮೂರಕ್ಕೆ ಏರಿಕೆಯಾಗಿದ್ದರೆ, 52 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳುವ ಮೂಲಕ ಗುಣಮುಖರ ಸಂಖ್ಯೆ 721ಕ್ಕೇರಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ್ ಅನ್ವಯ,ಗುರುವಾರದ ಸಂಜೆಯ ವರಗೆ.ನಗರದ ಚೌಡೇಶ್ವರಿ ಗುಡಿ ಬೀದಿಯ 60ವರ್ಷದ ಮಹಿಳೆ ತೀವ್ರ ಉಸಿರಾಟದ ಸಮಸ್ಯೆಯಿಂದ ಸಾವನಪ್ಪಿದ್ದು 45 ಮಂದಿ ಪುರುಷರು ಹಾಗೂ 22 ಜನ ಮಹಿಳೆ ಸೇರಿ ಅರವತ್ತೇಳು ಜನರಿಗೆ ಸೋಂಕು ದೃಡಪಟ್ಟಿದೆ.ಅಲ್ಲದೆ ಇಂದು 52ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ
ಹರಿತಲೇಖನಿಗೆ ದೊರಕಿರುವ ವರದಿಯಂತೆ,ಮಜರಾಹೊಸಹಳ್ಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು 26, ಬೀರಯ್ಯನಪಾಳ್ಯ 12, ಕರೇನಹಳ್ಳಿ 4, ತೂಬಗೆರೆ, ಸಿಲ್ವರ್ ಪಾರ್ಕ್ ದೊಡ್ಡತುಮಕೂರು, ಕೋರ್ಟ್ ರಸ್ತೆಯಲ್ಲಿ ತಲಾ ಎರಡು ಹಾಗು ಮೆಳೇಕೋಟೆ, ದೊಡ್ಡತುಮಕೂರು, ತಿಗಳರಪೇಟೆ, ತ್ಯಾಗರಾಜನಗರ, ಟ್ಯಾಂಕ್ ರಸ್ತೆ, 14 ವಾರ್ಡ್, ದೇವರಾಜನಗರ, ದರ್ಗಾಜೋಗಹಳ್ಳಿ, ಸಿದ್ದೇನಾಯಕನಹಳ್ಳಿ, ಕುಚ್ಚಪ್ಪನಪೇಟೆ, ಜಯನಗರ, ಕನಸವಾಡಿ, ಬಾಶೆಟ್ಟಿಹಳ್ಳಿ, ಪಾಲನಜೋಗಹಳ್ಳಿ, ಗಾಣಿಗರಪೇಟೆ, ಬ್ರಾಹ್ಮಣರಬೀದಿ, ಕಂಟನಕುಂಟೆ, ಲಿಂಗನಹಳ್ಳಿ ಮತ್ತು ಕುಚ್ಚಪ್ಪನಪೇಟೆಯ ಐದನೇ ರಸ್ತೆಯಲ್ಲಿ ತಲಾ ಒಬ್ಬರಲ್ಲಿ ಸೊಂಕು ದೃಡಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 1023 ಮಂದಿಗೆ ಸೋಂಕು ತಗುಲಿದ್ದು,721 ಮಂದಿ ಗುಣಮುಖರಾಗಿದ್ದರೆ 26 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 48 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 228 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಕೆಂಗೇರಿಯ ಮಹಾವೀರ್ ಜೈನ್ ವಿದ್ಯಾರ್ಥಿ ನಿಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.