ದೆಹಲಿ: ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿ ಕೋಮಾಗೆ ಜಾರಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನರಾಗಿದ್ದಾರೆ.
ಈ ಕುರಿತು ಅವರ ಮಗ ಅಭಿಜಿತ್ ಮುಖರ್ಜಿ ಟ್ವಿಟ್ ಮಾಡಿ ತಿಳಿಸಿದ್ದು.ನನ್ನ ತಂದೆ ಶ್ರೀ ಪ್ರಣಬ್ ಮುಖರ್ಜಿ ಅವರು ಆರ್ಆರ್ ಆಸ್ಪತ್ರೆಯ ವೈದ್ಯರ ಅತ್ಯುತ್ತಮ ಪ್ರಯತ್ನಗಳು ಮತ್ತು ಭಾರತದಾದ್ಯಂತದ ಜನರಿಂದ ಪ್ರಾರ್ಥನೆಗಳು, ದುವಾಸ್ ಹಾಗೂ ಅತ್ಯುತ್ತಮ ಪ್ರಯತ್ನಗಳ ನಡುವೆಯು ನಿಧನರಾಗಿದ್ದಾರೆ ಎಂದು ನಿಮಗೆ ತಿಳಿಸುತ್ತೇನೆ.ಅವರ ಆರೋಗ್ಯಕ್ಕಾಗಿ ಪ್ರಾರ್ಥಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
ಶ್ವಾಸಕೋಶದ ಸೋಂಕಿನಿಂದ ಪ್ರಣಬ್ ಮುಖರ್ಜಿ ಆಗಸ್ಟ್ 10ರಂದು ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಮೂತ್ರಪಿಂಡದಲ್ಲೂ ಸಮಸ್ಯೆಯಾಗಿದೆ. ದಿನಕಳೆದಂತೆ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಕ್ಷೀಣಿಸುತ್ತಿತ್ತು,ಪ್ರಣಬ್ ಮುಖರ್ಜಿ ಕೋಮಾಗೆ ಜಾರಿದ್ದರು.ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು ನಾವು ಎಷ್ಟೇ ಪ್ರಯತ್ನಿಸಿದರೂ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿಲ್ಲ ಎಂದು ಸೇನಾ ಆಸ್ಪತ್ರೆ ವೈದ್ಯರು ಈ ಮುಂಚೆ ಹೇಳಿದ್ದರು.