ದೊಡ್ಡಬಳ್ಳಾಪುರ: ಕಳೆದೆರಡು ದಿನಗಳಿಂದ ತಾಲೂಕು ಆರೋಗ್ಯ ಇಲಾಖೆ ಮತ್ತು ಆಡಳಿತ ಸಹಯೋಗದಲ್ಲಿ ಕರೊನಾ ಸೋಂಕಿನ ತಪಾಸಣೆ ತೀವ್ರಗೊಂಡಿದ್ದು ಸೋಂಕಿತರ ಸಂಖ್ಯೆ ಹೆಚ್ಚಲಾರಂಭಿಸಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ,ಬುಧವಾರದ ಸಂಜೆಯ ವರಗೆ.ದೊಡ್ಡಬಳ್ಳಾಪುರ ತಾಲ್ಲೂಕಿನ 22 ಪುರುಷರು ಹಾಗೂ 24 ಮಹಿಳೆಯರು ಸೇರಿ 46 ಜನರಿಗೆ ಸೋಂಕು ದೃಡಪಟ್ಟಿದೆ.
ಹರಿತಲೇಖನಿಗೆ ದೊರೆತಿರುವ ಮಾಹಿತಿಯಂತೆ.ಟ್ಯಾಂಕ್ ರಸ್ತೆಯಲ್ಲಿ 4, ಎಳ್ಳುಪುರ, ದೇವರಾಜನಗರ ತಲಾ 3, ಖಾಸ್ ಬಾಗ್, ಪಾಲನಜೋಗಹಳ್ಳಿ, ಪ್ರಿಯದರ್ಶಿನಿ ಬಡಾವಣೆ, ಶ್ರೀನಗರ, ವಿದ್ಯಾನಗರ, ಶಾಂತಿನಗರದಲ್ಲಿ ತಲಾ 2 ಹಾಗೂ ತೂಬಗೆರೆ, ಸೋಮೇಶ್ವರ ಬಡಾವಣೆ, ವಿನಾಯಕನಗರ, ಸಂಜಯನಗರ, ರಘುನಾಥಪುರ, ಮುತ್ತೂರು, ಗುಂಡಮಗೆರೆ, ಗಾಣಿಗರಪೇಟೆ, ಚೈತನ್ಯನಗರ, ಹುಲಿಕುಂಟೆ, ಭುವನೇಶ್ವರಿ ನಗರ, ಗಂಗಾಧರಪುರ, ಕೊನಘಟ್ಟ, ಇಸ್ಲಾಂಪುರ, ಸಕ್ಕರೆಗೊಲ್ಲಹಳ್ಳಿ, ತೂಬಗೆರೆ ಪೇಟೆ, ಮಾರುತಿನಗರ, ವಿಠೋಬಾ ದೇವಸ್ಥಾನದ ರಸ್ತೆ, ಕುಚ್ಚಪ್ಪನಪೇಟೆ, ತಳಗವಾರ, ಸಿಂಗನಾಯಕನಹಳ್ಳಿ, ರೋಜಿಪುರ ಮತ್ತು ಮಜರಾಹೊಸಹಳ್ಳಿಯ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 1199 ಮಂದಿಗೆ ಸೋಂಕು ತಗುಲಿದ್ದು, 812 ಮಂದಿ ಗುಣಮುಖರಾಗಿದ್ದರೆ 33 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 34 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 320 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರ ಹಾಗೂ ಕೆಂಗೇರಿಯ ಮಹಾವೀರ್ ಜೈನ್ ವಿದ್ಯಾರ್ಥಿ ನಿಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.