ದೊಡ್ಡಬಳ್ಳಾಪುರ: ಇಲ್ಲಿನ ಬಸವೇಶ್ವರ ನಗರದ ರಾಜಣ್ಣ ಅವರ ಮನೆಯ ಬಾಗಿಲಿನ ಬೀಗ ಮುರಿದು ಚಿನಾಭರಣ ಕಳುವು ಮಾಡಲಾಗಿದೆ.
ರಾಜಣ್ಣ ಅವರು ಕುಟುಂಬ ಸಮೇತ ಮಂಗಳವಾರ ಸಂಬಂಧಿಕರ ಮನೆಗೆ ಹೋಗಿದ್ದರು.ಬುಧವಾರ ಸಂಜೆ ಮನೆಗೆ ಬಂದಿರುವ ರಾಜಣ್ಣ ಅವರು ಮನೆಯ ಬೀಗ ಮುರಿದಿರುವುದನ್ನು ನೋಡಿದಾಗಲೆ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ಚಿನ್ನಾಭರಣ ಹಾಗೂ ನಗದು ಹುಡುಕಾಟಕ್ಕಾಗಿ ಮನೆಯಲ್ಲಿ ಬಟ್ಟೆಗಳನ್ನು ಜೋಡಿಸಿಟ್ಟಿದ್ದ ಬೀರು ಸೇರಿದಂತೆ ಎಲ್ಲವನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸು ದೂರು ದಾಖಲಿಸಿಕೊಂಡಿದ್ದಾರೆ.