ದೊಡ್ಡಬಳ್ಳಾಪುರ: ತೋಟಗಾರಿಕೆ ಇಲಾಖೆ ವತಿಯಿಂದ 2020-21ನೇ ಸಾಲಿನ ಸಮಗ್ರ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಶೀಥಲ ವಾಹನ(Refrigerated Van), ಶೀಥಲ ಕೊಠಡಿ(Cold room Stagging), ಹಣ್ಣು ಮಾಗಿಸುವ ಘಟಕ(Ripening Chamber), ಸಮುದಾಯ ಕೃಷಿಹೊಂಡ, ಅಣಬೆ ಉತ್ಪಾದನಾ ಘಟಕ ಮತ್ತು Static/Mobile vending Cart/Platform with cool chamber ಘಟಕಗಳನ್ನು ತೋಟಗಾರಿಕಾ ಅಭಿವೃದ್ಧಿಯಲ್ಲಿ ಪರಿಣಾಮಕಾರಿಯಾಗಿ ನಿರ್ಮಿಸಿದ್ದಲ್ಲಿ, ಫಲಾನುಭವಿಗಳು ಸಹಾಯಧನವನ್ನು ಪಡೆಯಬಹುದಾಗಿದ್ದು, ಈ ಯೋಜನೆಯಡಿ ಫಲಾನುಭವಿಗಳಾಗಲಿಚ್ಛಿಸುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕುಗಳ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸದರಿ ಕಾರ್ಯಕ್ರಮದಡಿ ಘಟಕಗಳನ್ನು ಮಾರ್ಗಸೂಚಿಯನ್ವಯ ನಿರ್ಮಿಸಿಕೊಂಡು ಸಹಾಯಧನ ಪಡೆಯಲಿಚ್ಛಿಸುವ ಆಸಕ್ತ ರೈತರುಗಳು, ಸಂಬಂಧಪಟ್ಟ ತಾಲ್ಲೂಕುಗಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ನಿಗದಿತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು 2020ರ ಸೆಪ್ಟೆಂಬರ್ 16 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೇವನಹಳ್ಳಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಗಂಗಪ್ಪ.ಎಸ್.ಹೊಂಬಾಳ ಮೊ.ಸಂ.: 9845643312, ತಾಂತ್ರಿಕ ಸಹಾಯಕ ಆದರ್ಶ.ಆರ್.ಕೆ ಮೊ.ಸಂ.: 8892367827, ಕಚೇರಿ ದೂ.ಸಂ.: 080-27681204, ದೊಡ್ಡಬಳ್ಳಾಪುರ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಂ. ಶ್ರೀನಿವಾಸ್ ಮೊ.ಸಂ.: 9632410677, ತಾಂತ್ರಿಕ ಸಹಾಯಕ ಮಾರುತಿ ಮೊ.ಸಂ.: 9741895988, ಕಚೇರಿ ದೂ.ಸಂ.: 080-27623770, ಹೊಸಕೋಟೆ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಆರ್.ಪ್ರಶಾಂತ್ ಮೊ.ಸಂ.: 9538953949, ತಾಂತ್ರಿಕ ಸಹಾಯಕ ಸೋಮಶೇಖರ್ ಮೊ.ಸಂ.: 8453966868, ಕಚೇರಿ ದೂ.ಸಂ.: 080-29716626, ನೆಲಮಂಗಲ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಸುಬ್ರಮಣ್ಯ.ಜೆ.ವಿ. ಮೊ.ಸಂ.: 9901754339, ತಾಂತ್ರಿಕ ಸಹಾಯಕ ವಿಜಯಕುಮಾರ್ ಮೊ.ಸಂ.: 9902581832 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು(ಜಿಪಂ) ಮಾಹಾಂತೇಶ ಮುರಗೋಡ (ಮೊ.ಸಂ.: 9448999214) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.