ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮಾಗಡಿ ತಾಲೂಕಿನ ಕೆಲ ಗ್ರಾಮಗಳಲ್ಲಿನ ವಿದ್ಯಾಗಮ ಕಲಿಕಾ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಮಾಗಡಿ ತಾಲ್ಲೂಕಿನ ಕಲ್ಲೂರು, ವರದೇನಹಳ್ಳಿ, ಬಾಚೇನಹಳ್ಳಿ, ತಗಚುಗುಪ್ಪೆ, ಬಂಟರಕುಪ್ಪೆ ಕಾಲೋನಿ, ಬಂಟರಕುಪ್ಪೆ, ಬೆಳಗುಂಬ ಮತ್ತು ಮಾಗಡಿ ಸ್ಥಳಗಳಲ್ಲಿ ನಡೆಯುತ್ತಿದ್ದ ವಿದ್ಯಾಗಮ ಕಲಿಕಾ ಕೇಂದ್ರಗಳಿಗೆ ಭೇಟಿ ನೀಡಿದ ಸಚಿವರು
ಮಕ್ಕಳೊಂದಿಗೆ ಕಲೆತು ಮಾತನಾಡಿದ್ದು.ಅವರೇನು ಕಲಿಯುತ್ತಿದ್ದಾರೆಂದು ವಿಚಾರಿಸಿದರು.ಅಲ್ಲದೆ,ಕೆಲ ಪ್ರಶ್ನೆಗಳನ್ನು ಕೇಳಿ ಕರೊನಾ ಕುರಿತು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಅವರಲ್ಲಿನ ಮಾಹಿತಿ ಪರೀಕ್ಷಿಸಿದರು
ಈ ವೇಳೆ ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳು ಜೊತೆಯಲ್ಲಿದ್ದರು.