ದೊಡ್ಡಬಳ್ಳಾಪುರ: ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಶುಕ್ರವಾರದ ಬುಲೆಟಿನ್ ಮಾಹಿತಿಯಂತೆ ತಾಲೂಕಿನ 64 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ,ಶುಕ್ರವಾರದ ಸಂಜೆಯ ವರಗೆ.ದೊಡ್ಡಬಳ್ಳಾಪುರ ತಾಲ್ಲೂಕಿನ 39 ಪುರುಷರು ಹಾಗೂ 25 ಮಹಿಳೆಯರು ಸೇರಿ 64 ಜನರಿಗೆ ಸೋಂಕು ದೃಡಪಟ್ಟಿದ್ದು,24 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಹರಿತಲೇಖನಿಗೆ ದೊರೆತಿರುವ ಮಾಹಿತಿಯಂತೆ.ತೂಬಗೆರೆ 11,ಶಾಂತಿನಗರ 6, ದೇವರಾಜನಗರ 5, ಭುವನೇಶ್ವರಿ ನಗರ, ಮೆಳೇಕೋಟೆ ತಲಾ 3, ದೊಡ್ಡಬಳ್ಳಾಪುರ ನಗರ, ಸೋಮೇಶ್ವರ ಬಡಾವಣೆ, ರೋಜಿಪುರ, ಕುಚ್ಚಪ್ಪನಪೇಟೆ, ಅರಳು ಮಲ್ಲಿಗೆ, ಬಾಶೆಟ್ಟಿಹಳ್ಳಿಯಲ್ಲಿ ತಲಾ 2, ಗಾಂಧಿನಗರ, ತೂಬಗೆರೆ ಪೇಟೆ, ಸುಭಾಷ್ ನಗರ, , ಕರೇನಹಳ್ಳಿ, ಕಣಿವೇಪುರ, ಹಣಬೆ,ಚೈತನ್ಯನಗರ, ತಿಪ್ಪೂರು, ಪೊಲೀಸ್ ಕ್ವಾಟ್ರಸ್, ಸಂಜಯನಗರ, ಬ್ರಾಹ್ಮಣರ ಬೀದಿ, ದರ್ಗಾಜೋಗಹಳ್ಳಿ, ಗಂಗಾಧರಪುರ ಲೇಔಟ್, ಮಾರುತಿ ನಗರ, ಗಂಗಾಧರಪುರ, ಪಾಲನಜೋಗಹಳ್ಳಿ, ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ, ಉಜ್ಜನಿ, ಕಚೇರಿ ಪಾಳ್ಯ ಹಾಗೂ ಬಸವೇಶ್ವರ ನಗರದ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 1308 ಮಂದಿಗೆ ಸೋಂಕು ತಗುಲಿದ್ದು, 880 ಮಂದಿ ಗುಣಮುಖರಾಗಿದ್ದರೆ 41 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 56 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 331 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರ ಹಾಗೂ ಕೆಂಗೇರಿಯ ಮಹಾವೀರ್ ಜೈನ್ ವಿದ್ಯಾರ್ಥಿ ನಿಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.