ದೊಡ್ಡಬಳ್ಳಾಪುರ: ಅಕ್ರಮ ಸಂಬಂಧದ ಶಂಕೆಯಿಂದ ಗಂಡನೋರ್ವ ಹೆಂಡತಿಯನ್ನು ಹತ್ಯೆ ಮಾಡಿರುವ ಘಟನೆ ತಾಲೂಕಿನ ತಳಗವಾರ ಗ್ರಾಮದಲ್ಲಿ ನಡೆದಿದೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹತ್ಯೆಯಾದ ಮೃತಳನ್ನು ದೀಪಿಕಾ(31) ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ಮೃತಳ ಗಂಡ ಮಂಜುನಾಥ್ (40) ಆಕೆಯೊಂದಿದ್ದ ಅಕ್ರಮ ಸಂಬಂಧ ವಿಚಾರವಾಗಿ ಜಗಳ ತೆಗೆದಿದ್ದಾರೆ ಎನ್ನಲಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮಂಜುನಾಥ್ ಕೈ ಸಿಕ್ಕ ಕಬ್ಬಿಣದ ತುಂಡಿನಿಂದ ದೀಪಿಕಾ ತಲೆ ಬಲವಾಗಿ ಒಡೆದ ಕಾರಣ ಆಕೆ ಸ್ಥಳದಲ್ಲೆ ಸಾವನಪ್ಪಿದ್ದಾರೆಂದು ಪೊಲೀಸ್ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ಸ್ವಂತ ಅಕ್ಕನ ಮಗಳನ್ನು ಮದುವೆಯಾಗಿದ್ದ ಮಂಜುನಾಥ್,ದೀಪಿಕಾ ದಂಪತಿಗೆ 8 ವರ್ಷದ ಗಂಡು ಮಗುವಿದೆ.ಪ್ರಸ್ತುತ ಹತ್ಯೆ ಆರೋಪಿ ಮಂಜುನಾಥ್ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.