ದೊಡ್ಡಬಳ್ಳಾಪುರ: ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಜಯಂತಿ ಅಂಗವಾಗಿ ಶುಕ್ರವಾರ ವಾತ್ಸಲ್ಯಧಾಮ ಚಾರಿಟಬಲ್ ಟಸ್ಟ್ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಪುರಾತನ ಇತಿಹಾಸವುಳ್ಳ ಪ್ರಚಂಡ ಅಂಜನೇಯ ಸ್ವಾಮಿ ದೇವಾಲಯ, ಪುರಾತನ ಕಲ್ಯಾಣಿ ಮತ್ತು ಮಂಟಪದ ಅವರಣ ಸ್ವಚ್ಚತಾ ಕಾರ್ಯಕ್ರಮ ಕೈಗೊಳ್ಳಲಾಯಿತು.ಅಲ್ಲದೆ ಸಸಿ ನೆಡುವ ಕಾರ್ಯಕ್ರಮವನ್ನು ತಾಲೂಕಿನ ಸಾಧು ಮಠ ಗ್ರಾಮದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ತೂಬಗೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಚಿದಾನಂದ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ಮುನಿನಾರಾಯಣಪ್ಪ, ಎಂಪಿಸಿಎಸ್ ಅಧ್ಯಕ್ಷ ದೇವರಾಜು, ಕಾರ್ಯದರ್ಶಿ ಮಹದೇವಯ್ಯ, ಮುಖಂಡರಾದ ಚೆನ್ನಕೇಶವ, ಅರಣ್ಯಾಧಿಕಾರಿ ವಿಜಯ ಕುಮಾರ್, ವಾತ್ಸಲ್ಯಧಾಮ ಚಾರಿಟಬಲ್ ಟ್ರಸ್ಟ್ ಗೌರವ ಅಧ್ಯಕ್ಷೆ ಲೀಲಾವತಿ.ಟಿ.ಈ , ಅಧ್ಯಕ್ಷ ಅರ್ಜುನ್.ವೈ.ಎನ್, ಕಾರ್ಯದರ್ಶಿ ಮದುಸೂದನ್, ಉಪಾಧ್ಯಕ್ಷೆ ಸವಿತ.ವಿ, ಖಾಜಾಂಜಿ ಪವನ್ ಕುಮಾರ್, ನಿರ್ದಶಕರಾದ ಗಗನ.ಜಿ ಕೃಷ್ಣ, ರೇಖ, ಹರ್ಷಿತ, ಧನುಜ, ದಿವಾಕರ್, ಕಿಷನ್ ಮತ್ತಿತರಿದ್ದರು.

