ದೊಡ್ಡಬಳ್ಳಾಪುರ: ಅಕಾಲಿಕ ಮರಣಕ್ಕೆ ಒಳಗಾದ ಎರಡು ಮಂಗಗಳ ಅಂತ್ಯಕ್ರಿಯೆ ಮಾಡಿರುವ ಯುವಕರು, ಮೂರನೇ ದಿನ ಪೂಜಾ ಕಾರ್ಯಕ್ರಮ ನಡೆಸಿರುವ ಘಟನೆ ತಾಲೂಕಿನ ಆರೂಢಿ ಗ್ರಾಮದಲ್ಲಿ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ವಿದ್ಯುತ್ ಸ್ಪರ್ಶಿಸಿ ಎರಡು ಮಂಗಗಳು ಅಕಾಲಿಕವಾಗಿ ಸಾವನಪ್ಪಿದ್ದು, ಗ್ರಾಮದ ಯುವಕರು ಮಂಗಗಳ ಅಂತ್ಯಕ್ರಿಯೆ ನಡೆಸಿದ್ದಾರೆ.
ಮೂರನೆ ದಿನದ ಕಾರ್ಯಕ್ಕೆ ಹಣವನ್ನು ಒಟ್ಟುಗೂಡಿಸಿ ಪೂಜಾ ಕಾರ್ಯಕ್ರಮ ನಡೆಸಿದ್ದು, ಪ್ರಸಾದ ವಿನಯೋಗ ಕೈಗೊಂಡರು.
ಗ್ರಾಮದಲ್ಲಿ ಹಲವು ವರ್ಷಗಳಿಂದ ಇದೇ ರೀತಿ ಮಂಗಗಳ ಅಕಾಲಿಕ ಮರಣಕ್ಕೆ ಅಂತ್ಯಕ್ರಿಯೆ, ಪೂಜಾ ಕಾರ್ಯ ನಿರ್ವಹಿಸುತ್ತಿದ್ದು, ಸಾವನಪ್ಪಿದ ಮಂಗಗಳಿಗೆ ಸಮಾಧಿ ನಿರ್ಮಿಸಿ ಹನುಮ ಜಯಂತಿಯಂದು ವಿಶೇಷ ಪೂಜೆ ನೆರವೇರಿಸುವುದು ವಿಶೇಷ.
ಈ ಪ್ರಶಂಸನೀಯ ಕಾರ್ಯದಲ್ಲಿ ತೊಡಗಿರುವ ಯುವಕರ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚಿಗೆಗೆ ಕಾರಣವಾಗಿದೆ.

