ನವದೆಹಲಿ: ವಿಶ್ವದ ಅತಿದೊಡ್ಡ ಹೆದ್ದಾರಿ ಸುರಂಗ ಖ್ಯಾತಿಯ ಅಟಲ್ ಸುರಂಗ ಇಂದು ಉದ್ಘಾಟನೆಗೊಳ್ಳಲಿದೆ.
ರೋಹಟ್ಯಾಂಗ್ ಸುರಂಗ ಎಂದು ಈ ಮೊದಲು ಕರೆಯಲ್ಪಡುತ್ತಿದ್ದ ಅಟಲ್ ಸುರಂಗದಿಂದ ಮನಾಲಿ ಹಾಗೂ ಲೇಹ್ ನಡುವಿನ ಅಂತರ 7 ಗಂಟೆಗೆ ಇಳಿದಿದ್ದು, 46 ಕಿಮೀ ಅಂತರ ಕಡಿಮೆಯಾಗಿದೆ.
ಸುಮಾರು 9.2 ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗವಾಗಿದ್ದು, ಜಗತ್ತಿನ ಅತೀ ಉದ್ದನೆಯ ಸುರಂಗ ಅನ್ನೋ ಹೆಗ್ಗಳಿಕೆ ಪಡೆದುಕೊಂಡಿದೆ. 3,300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
ಅಟಲ್ ಟನಲ್ ಸಮುದ್ರ ಮಟ್ಟದಿಂದ ಬರೋಬ್ಬರಿ 10 ಸಾವಿರ ಅಡಿ ಎತ್ತರದಲ್ಲಿರುವ ಈ ಹೆದ್ದಾರಿ ಸುರಂಗ ಮಾರ್ಗ ಹಿಮಾಚಲ ಪ್ರದೇಶದ ಮನಾಲಿ ಮತ್ತು ಲೇಹ್ ನಡುವೆ ಸುಲಭ ಸಂಪರ್ಕ ಕಲ್ಪಿಸುತ್ತದೆ.
ಅಟಲ್ ಟನಲ್ ಇಂದು ಲೋಕಾರ್ಪಣೆಗೊಳ್ಳಲಿದೆ. ಈ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಂಡೀಘಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

