ಬೆಂಗಳೂರು: ದಿವಂಗತ ಚಿರಂಜೀವಿ ಸರ್ಜಾ ಪತ್ನಿ ಮೇಘಾನ್ ರಾಜ್ ಅವರಿಗೆ ಸೀಮಂತ ಶಾಸ್ತ್ರ ಇಂದು ಮಾಡಲಾಗಿದೆ.
ಚಿರು ಕುಟುಂಬದವರು ಚಿರು ಅಗಲಿಕೆ ನೋವಲ್ಲಿದ್ದಾರೆ. ಹೀಗಾಗಿ ಮನೆಯವರು ಸರಳವಾಗಿ, ಬಹಳ ಖಾಸಗಿಯಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ.
ಚಿರಂಜೀವಿ ಸರ್ಜಾರ ದೊಡ್ಡ ಕಟೌಟ್ ಇಟ್ಟು ಮೇಘನಾ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ.ಆ ಮೂಲಕ ಚಿರು ತಮ್ಮ ಜೊತೆಯಲ್ಲಿಯೇ ಇದ್ದಾರೆ ಎಂದು ಮೇಘನಾ ಸಂತಸಪಟ್ಟಿದ್ದಾರೆ ಎನ್ನಲಾಗಿದೆ.

