ದೊಡ್ಡಬಳ್ಳಾಪುರ: ನಂದಿಬೆಟ್ಟದ ಪ್ರಕೃತಿಯ ಸೊಬಗನ್ನು ಸವಿಯಲು ಪ್ರವಾಸಿಗರ ದಂಡು ಏಕಾಏಕಿ ಲಗ್ಗೆ ಇಡುತ್ತಿರುವ ಕಾರಣ ಬೆಟ್ಟಕ್ಕೆ ಸಾಗುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಬೆಳಗಿನ ಜಾವ ಸುಮಾರು 5ಗಂಟೆಯಿಂದ ಆರಂಭವಾಗಿರುವ ವಾಹನ ದಟ್ಟಣೆಯಿಂದಾಗಿ ಬೆಟ್ಟದ ಸಾಗುವ ಬಹುತೇಕ ರಸ್ತೆಗಳಲ್ಲಿ ಬೈಕ್,ಕಾರುಗಳು ಜಾಮ್ ನಲ್ಲಿ ಸಿಲುಕಿಕೊಂಡಿವೆ.
ಕರೊನಾ ಸೋಂಕನ್ನು ತಡೆಗಟ್ಟಲು ಲಾಕ್ ಡೌನ್ ಘೋಷಿಸಿದ ಕಾರಣ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನು ಜಿಲ್ಲಾಡಳಿತ ನಿಷೇಧ ಹೇರಿತ್ತು, ಲಾಕ್ ಡೌನ್ ತೆರವಾದ ಕಾರಣ ಕಳೆದ ಎರಡು ವಾರಗಳ ಹಿಂದೆ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು.ಅಂದಿನಿಂದ ಪ್ರತಿ ವೀಕೆಂಡ್ ನಲ್ಲೂ ಬೆಟ್ಟಕ್ಕೆ ಪ್ರವಾಸಿಗರ ದಂಡು ಸಮರೊಪಾದಿಯಾಗಿ ಬರುತ್ತಿರುವ ಕಾರಣ ಟ್ರಾಫಿಕ್ ಜಾಮ್ ಉಂಟಾಗಿದೆ ಎನ್ನಲಾಗುತ್ತಿದೆ.

