ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ( ಅಕ್ಟೋಬರ್ 6 ರಂದು) 151 ಪುರುಷರು ಹಾಗೂ 61 ಮಹಿಳೆಯರು ಸೇರಿದಂತೆ 212 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಬುಲೆಟಿನ್ ವರದಿ ತಿಳಿಸಿದೆ.
ವರದಿಯನ್ವಯ ನೆಲಮಂಗಲ ತಾಲ್ಲೂಕಿನಲ್ಲಿ 44 ಪುರುಷರು ಮತ್ತು 18 ಮಹಿಳೆಯರು, ಹೊಸಕೋಟೆ ತಾಲ್ಲೂಕಿನಲ್ಲಿ 31 ಪುರುಷರು ಮತ್ತು 12 ಮಹಿಳೆಯರು, ದೇವನಹಳ್ಳಿ ತಾಲ್ಲೂಕಿನಲ್ಲಿ 9 ಪುರುಷರು ಮತ್ತು 3 ಮಹಿಳೆಯರು, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 64 ಪುರುಷರು ಮತ್ತು 27 ಮಹಿಳೆಯರು ಹಾಗೂ ಬೆಂಗಳೂರು ನಗರ ಜಿಲ್ಲೆ ಹಾಗೂ ಇತರೆ ಜಿಲ್ಲೆಗಳಿಗೆ ಸೇರಿದ 3 ಪುರುಷರು ಮತ್ತು 1 ಮಹಿಳೆಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.

