ವಾಷಿಂಗ್ಟನ್: ವಿಶ್ವದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿ, ಲಕ್ಷಾಂತರ ಜನರನ್ನು ಬಲಿ ಪಡೆದ ಕರೊನಾ ಸೋಂಕನ್ನು ಕುರಿತು ವಿಶ್ವದ ದೊಡ್ಡಣ್ಣ ಅಮೇರಿಕ ಅಧ್ಯಕ್ಷ ಟ್ರಂಪ್ ಸಣ್ಣ ಜ್ವರವಷ್ಟೆ ಎಂದು ಟ್ವಿಟ್ ಮಾಡಿರುವುದು ತೀವ್ರ ವಿವಾದವನ್ನು ಉಂಟು ಮಾಡಿದೆ.
ಕರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಮನೆಗೆ ಮರಳಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೊನಾ ಸೋಂಕು ಕೇವಲ ಸಣ್ಣ ಜ್ವರವಷ್ಟೆ ಎಂದು ಪೇಸ್ಬುಕ್ ಹಾಗೂ ಟ್ವಿಟರ್ ಖಾತೆಗಳಲ್ಲಿ ಸಂದೇಶ ಮಾಡಿದ್ದರು. ಈ ಸಂದೇಶ ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಫೇಸ್ಬುಕ್ ಹಾಗೂ ಟ್ವಿಟರ್ ಈ ಸಂದೇಶವನ್ನು ಡಿಲೀಟ್ ಮಾಡಿದ್ದರೆ, ಅಮೇರಿಕಾ ಅಧ್ಯಕ್ಷರ ಯಡವಟ್ಟಿಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

