ದೊಡ್ಡಬಳ್ಳಾಪುರ: ಸುಮಾರು 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ಸಿಕ್ಕು ಆತ್ಮಹತ್ಯೆ ಮಾಡಿಕೊಂಡರುವ ಘಟನೆ ದೊಡ್ಡಬಳ್ಳಾಪುರ ಮತ್ತು ರಾಜಾನುಕುಂಟೆ ರೈಲು ನಿಲ್ದಾಣಗಳ ನಡುವಿನ ಶ್ರೀರಾಮಪುರ ಲಕ್ಷ್ಮಿ ದೇವಸ್ಥಾನದ ಬಳಿ ನಡೆದಿದೆ.
ಮೃತನು ಕೆಂಪು ಬಣ್ಣದ ತುಂಬು ತೋಳಿನ ಶರ್ಟ್ ಧರಿಸುತ್ತಾರೆ. ಸುಮಾರು 5.9′ ಅಡಿಗಳು ಎತ್ತರವಿದ್ದು, ಕಪ್ಪು ಮೈಬಣ್ಣ,ನೀಳವಾದ ಮೂಗು,ತಲೆಯಲ್ಲಿ ಸುಮಾರು 3 ಇಂಚು ಉದ್ದ ಕಪ್ಪುಕೂದಲು, ಗಡ್ಡ ಮೀಸೆ ಬಿಟ್ಟಿದ್ದು,ಸಾಧಾರಣ ಶರೀರ ಹೊಂದಿದ್ದಾನೆ ಎಂದು ರೈಲ್ವೇ ಪೊಲೀಸರು ಹರಿತಲೇಖನಿಗೆ ತಿಳಿಸಿದ್ದಾರೆ.
ಈತನ ಬಗ್ಗೆ ಮಾಹಿತಿ ಇದಲ್ಲಿ ಸಂಬಂಧಿಸಿದವರು ದೊಡ್ಡಬಳ್ಳಾಪುರ ರೈಲ್ವೇ ಪೊಲೀಸ್ ಮೊಬೈಲ್ ಸಂಖ್ಯೆ 9480802143 ಸಂಪರ್ಕಿಸಬಹುದು.

