ದೊಡ್ಡಬಳ್ಳಾಪುರ: ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿಯಾಗಿದ್ದ ಪುರುಷೋತ್ತಮ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಕಾರಣ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಬಿಎಸ್ಪಿ ಕರ್ನಾಟಕ ಉಸ್ತುವಾರಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಈ ಕುರಿತು ಹರಿತಲೇಖನಿಗೆ ನೀಡಿರುವ ಹೇಳಿಕೆಯಲ್ಲಿ,ಪುರುಷೋತ್ತಮ್ ಎಂಬ ವ್ಯಕ್ತಿ ನಮ್ಮ ಪಕ್ಷದಲ್ಲಿ ಕಾರ್ಯಕರ್ತನಾಗಿದ್ದು. ನಮ್ಮ ಪಕ್ಷದಿಂದ ಇವರಿಗೆ ಯಾವುದೇ ಹುದ್ದೆಯನ್ನು ಕೊಟ್ಟಿರುವುದಿಲ್ಲ. ಆದರೂ ಪುರುಷೋತ್ತಮ್ ಎಂಬುವವರು ನಮ್ಮ ರಾಜ್ಯದ ಪ್ರಧಾನ ಕಾರ್ಯದರ್ಶಿ ಎಂದು ದೊಡ್ಡಬಳ್ಳಾಪುರದ ಸುತ್ತಮುತ್ತಾ ದೊಡ್ಡ ದೊಡ್ಡ ಕಟೌಟ್ಸ್ ಗಳನ್ನು ಮತ್ತು ಪೋಸ್ಟರ್ಸ್ ಗಳನ್ನು ಹಾಕಿರುತ್ತಾರೆ. ಬಹುಜನ ಸಮಾಜ ಪಕ್ಷ ರಾಷ್ಟ್ರೀಯ ಪಕ್ಷವಾಗಿದ್ದು. ಇವರು ಪಕ್ಷದ ಶಿಸ್ತಿಗೆ ಬದ್ಧರಾಗಿರುವುದಿಲ್ಲ ಮತ್ತು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುತ್ತಾರೆ.
ಆದ್ದರಿಂದ ಇವರನ್ನು ಇಂದಿನಿಂದಲೇ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗುತ್ತಿದೆ ಎಂದಿದ್ದಾರೆ.
ನನ್ನ ವಿರುದ್ದ ರಾಜಕೀಯ ಶಡ್ಯಂತ್ರ: ಪುರುಷೋತ್ತಮ್
ಪಕ್ಷದಿಂದ ಉಚ್ಚಾಟನೆ ಮಾಡುವ ಅಧಿಕಾರ ಮಾರಸಂದ್ರ ಮುನಿಯಪ್ಪನವರಿಗಿಲ್ಲ. ಪಕ್ಷ ಸಂಘಟನೆಗಾಗಿ ಹಲವು ವರ್ಷಗಳಿಂದ ನಾ ಪಟ್ಟ ಶ್ರಮ ರಾಜ್ಯಾಧ್ಯಕ್ಷರಿಗೆ ಹಾಗೂ ಅಕ್ಕ ಮಾಯವತಿಯವರಿಗೆ ತಿಳಿದಿದ್ದು.ಈ ಪತ್ರಿಕಾ ಹೇಳಿಕೆ ನೀಡಿರುವ ಕ್ರಮದ ವಿರುದ್ದ ಮಾಯಾವತಿಯವರಿಗೆ ಹಾಗೂ ರಾಜ್ಯ ಉಸ್ತುವಾರಿ ಅಶೋಕ್ ಸಿದ್ದಾರ್ಥ ಅವರಿಗೆ ದೂರು ನೀಡಲಾಗುವುದೆಂದು ಪುರುಷೋತ್ತಮ್ ಹರಿತಲೇಖನಿಗೆ ತಿಳಿಸಿದ್ದಾರೆ.

