ಬೆಂಗಳೂರು: ಸಾರ್ವಜನಿಕರ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಮಾಸ್ಕ್ ಧರಿಸದವರಿಗೆ 1000 ರೂ ವರೆಗೆ ದಂಡದ ಆದೇಶವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದ್ದು, ದಂಡದ ಮೊತ್ತವನ್ನು 250 ರೂಗೆ ಇಳಿಸಿದೆ.
ಕರೊನಾ ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮವಾಗಿ ಮಾಸ್ಕ್ ಧರಿಸದವರಿಗೆ 1000 ರೂ ವರೆಗೆ ದಂಡ ವಿಧಿಸಿ ಆದೇಶಿಸಿತ್ತು. ರಾಜ್ಯ ಸರ್ಕಾರದ ಈ ಆದೇಶ ಭಾರೀ ವಿರೋಧ ಕೇಳಿಬಂದ ಹಿನ್ನೆಲೆ ದಂಡದ ಮೊತ್ತವನ್ನು ಕಡಿಮೆ ಮಾಡಲಾಗಿದೆ.
ನಗರ ಪ್ರದೇಶದಲ್ಲಿ ವಿಧಿಸಲಾಗುತ್ತಿದ್ದ 1000 ರೂನಿಂದ 250 ರೂಗೆ,ಗ್ರಾಮೀಣ ಪ್ರದೇಶಗಳಲ್ಲಿ 500 ರೂನಿಂದ 100 ರೂಗೆ ಇಳಿಸಿ ಆದೇಶ ಹೊರಡಿಸಿದೆ.

