ಬೆಂಗಳೂರು: ಗ್ರಾಮಾಂತರ ಜಿಲ್ಲೆಯಲ್ಲಿ ಮಧ್ಯಾಹ್ನ 12:00 ಗಂಟೆಯವರೆಗೆ ಶೇ.45.94 ರಷ್ಟು ಮತದಾನವಾಗಿದ್ದು, 2268 ಮತದಾರರ ಪೈಕಿ,1042 ಮತದಾರರಿಂದ ಮತ ಚಲಾವಣೆಯಾಗಿದೆ.
ತಾಲ್ಲೂಕಿನ ಐದು ಹೋಬಳಿ ಕೇಂದ್ರದಲ್ಲೂ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ತಹಶೀಲ್ದಾರ್ ಟಿ.ಎಸ್.ಶಿವರಾಜ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ತಾಲ್ಲೂಕಿನಲ್ಲಿ 677 ಜನ ಮತದಾರರಿದ್ದಾರೆ. ಇದರಲ್ಲಿ 274 ಮಹಿಳೆಯರು, 403 ಪುರುಷರು. ಕಸಬಾ ಹೋಬಳಿ 442, ದೊಡ್ಡಬೆಳವಂಗಲ 65, ಮಧುರೆ 65, ಸಾಸಲು 41, ತೂಬಗೆರೆ 64 ಜನ ಮತದಾರರಿದ್ದಾರೆ.

