ಬೆಂಗಳೂರು: ಗ್ರಾಮಾಂತರ ಜಿಲ್ಲೆಯಲ್ಲಿ ಮಧ್ಯಾಹ್ನ 2:00 ಗಂಟೆಯವರೆಗೆ ಶೇ.72 ರಷ್ಟು ಮತದಾನವಾಗಿದೆ. 2268 ಮತದಾರರ ಪೈಕಿ, 1638 ಮತದಾರರಿಂದ ಮತ ಚಲಾವಣೆಯಾಗಿದೆ.
ಉಳಿದಂತೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಶೇ. 52 ರಷ್ಟು ಮತದಾನವಾಗಿದೆ. ಇದಕ್ಕುಮುನ್ನ 12 ಗಂಟೆಗೆ ಶೇ.32 ರಷ್ಟು ಮತದಾನವಾಗಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 17 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ನೆಲಮಂಗಲ ತಾಲ್ಲೂಕಿನಲ್ಲಿ 3, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 5, ಹೊಸಕೋಟೆ ತಾಲ್ಲೂಕಿನಲ್ಲಿ 5 ಹಾಗೂ ದೇವನಹಳ್ಳಿ ತಾಲ್ಲೂಕಿನಲ್ಲಿ 4 ಮತಗಟ್ಟೆ ಸ್ಥಾಪಿಸಲಾಗಿದ್ದು 7 ಮತಗಟ್ಟೆ ಗಳು ಸೂಕ್ಷ್ಮ ವಲಯ ಎಂದು ಗುರ್ತಿಸಲಾಗಿತ್ತು.
ಶಿಕ್ಷಕರ ಕ್ಷೇತ್ರದ ಚುನಾವಣೆ ಯಲ್ಲಿ 1260 ಪುರುಷ ಮತದಾರರು 1008 ಮಹಿಳಾ ಮತದಾರರು ಒಟ್ಟಾರೆ 2268 ಮತದಾರರಿದ್ದು 17ಮತಗಟ್ಟೆ ಕೇಂದ್ರಗಳಿಗೆ 4 ಮತಗಟ್ಟೆ ಅಧಿಕಾರಿಗಳಂತೆ ಒಟ್ಟಾರೆ 68 ಮಂದಿ ಯನ್ನು ನಿಯೋಜಿಸಲಾಗಿದ್ದು ಹಾಗೂ 16 ಮಂದಿ ಅಧಿಕಾರಿಗಳನ್ನು ಕಾಯ್ದಿರಿಸಲಾಗಿತ್ತು.

