ಬೆಂಗಳೂರು: ಗ್ರಾಮಾಂತರ ಜಿಲ್ಲೆಯಲ್ಲಿ ಸಂಜೆ 4:00 ಗಂಟೆಯವರೆಗೆ ಶೇ.87% ರಷ್ಟು ಮತದಾನ ನಡೆದಿದೆ.
ಜಿಲ್ಲೆಯ 2268 ಮತದಾರರ ಪೈಕಿ, 1963 ಮತದಾರರಿಂದ ಮತ ಚಲಾವಣೆ ನಡೆದಿದ್ದು ಉತ್ತಮ ಮತ ಚಲಾವಣೆಯತ್ತ ಚುನಾವಣೆ ನಡೆದಿದ್ದು ಶೇ.100 ರಷ್ಟು ಮತದಾನಕ್ಕೆ ಕೇವಲ 305 ಮತಗಳು ಬಾಕಿ ಉಳಿದಿದೆ. ಮತದಾನದ ಸಮಯ 5 ಗಂಟೆಗೆ ಅಂತ್ಯವಾಗಿದ್ದು ಅಂತಿಮ ವರದಿಗಾಗಿ ಕಾಯಲಾಗುತ್ತಿದೆ.
ಉಳಿದಂತೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಶೇ. 63 ರಷ್ಟು ಮಾತ್ರ ಮತದಾನವಾಗಿದೆ.

