ಬೆಂಗಳೂರು: ರಾಜ್ಯ ಛಾಯಾವೃತ್ತಿ ಸಮೂಹವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಛಾಯಾಗ್ರಾಹಕರ ಸಂಘದಿಂದ ಇಂದು ರಾಜ್ಯಾದ್ಯಂತ ಪೊಟೋಗ್ರಫಿ ಬಂದ್ ಮಾಡಿ ಬೆಂಗಳೂರು ಚಲೋ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಕೆಪಿಎ ರಾಜ್ಯ ಉಪಾಧ್ಯಕ್ಷ ಬೀಡಿಕೆರೆ ರವಿಕುಮಾರ್ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಪೊಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ಬಿಡಿಗೆರೆ ರವಿಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾಹಿ ನೀಡಿರುವ ಅವರು, ಕೋವಿಡ್-19 ಹಾಗೂ ನೆರೆ ಸಂತ್ರಸ್ತ ಛಾಯಾಗ್ರಾಹಕರಿಗೆ ಪ್ಯಾಕೇಜ್ ಘೋಷಿಸುವುದು, ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿದ ಛಾಯಾಗ್ರಹಕರಿಗೆ ಕಾರ್ಮಿಕ ಇಲಾಖೆಯ ಯೋಜನೆ ಹಾಗೂ ಸ್ಮಾರ್ಟ್ ಕಾರ್ಡ್ ನೀಡುವುದು, ಛಾಯಾಗ್ರಾಹಕ ಅಕಾಡೆಮಿ ಸ್ಥಾಪನೆ, ಕೆಪಿಎ ಛಾಯಾ ಭವನಕ್ಕೆ ನಿವೇಶನ, ವೃತ್ತಿಪರ ಛಾಯಾಗ್ರಾಹಕರ ನೆರವಿಗೆ ಸರ್ಕಾರ ಹಾಗೂ ಬ್ಯಾಂಕ್ ಗಳಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವುದು, ಮುಖ್ಯವಾಗಿ ಗ್ರಾಪಂ, ಜಿಪಂ ಹಾಗೂ ಇನ್ನಿತರ ವಿಭಾಗಗಳಲ್ಲಿ ಸರ್ಕಾರಿ ಅಧಿಕಾರಿಗಳೆ ಛಾಯಾಚಿತ್ರ ತೆಗೆಯುವುದು ನಿಷೇಧಿಸುವ ಆದೇಶ ಜಾರಿ ಮಾಡಬೇಕೆಂದರು.
ದೊಡ್ಡಬಳ್ಳಾಪುರ ತಾಲೂಕು ಪೊಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ಖಜಾಂಚಿ ಗುರುಶಂಕರಾಚಾರ್ ಮಾಹಿತಿ ನೀಡಿ, ಛಾಯಾಗ್ರಾಹಕರಿಗೆ ವೃತ್ತಿ ಭದ್ರತೆ ಇಲ್ಲವಾಗಿದೆ. ಸರ್ಕಾರಿ ಕೆಲಸಗಳಿಗೆ, ಸ್ಟುಡಿಯೋ ಪಾಸ್ಪೋರ್ಟ್ ತೆಗೆಯಲು ವೃತ್ತಿಪರರಿಗೆ ಆಧ್ಯತೆ ನೀಡಬೇಕಿದೆ, ಸರ್ಕಾರದ ಮತದಾರ ಗುರುತಿನ ಚೀಟಿ, ಆಧಾರ್, ಆರ್.ಟಿ.ಓ, ಪಾಸ್ ಪೋರ್ಟ್, ಸಬ್ ರಿಜಿಸ್ಟ್ರಾರ್, ಇತ್ಯಾದಿ ಕಚೇರಿಯಲ್ಲಿ ವೆಬ್ ಕ್ಯಾಮೆರಾ ನಿಷೇಧ ಮಾಡಿ ಛಾಯಾಗ್ರಾಹಕರಿಗೆ ಅವಕಾಶ ನೀಡಬೇಕಿದೆ. ಅಲ್ಲದೆ ಚುನಾವಣೆಯಲ್ಲಿ ಸಂಘದಿಂದ ಗುರುತಿಸಲ್ಪಡುವವವರಿಗೆ ಮಾತ್ರಾ ಅವಕಾಶ, ಛಾಯಾಗ್ರಾಹಕರಿಗೆ ಜೀವ ವಿಮೆ, ಅಪಘಾತ ವಿಮೆ, ಪರಿಕರಗಳ ವಿಮೆಯಙತಹ ಯೋಜನೆ ನೀಡಬೇಕಿದೆ.ಹಾಗೂ ಬಡ ವೃತ್ತಿಪರ ಛಾಯಾಗ್ರಾಹಕರಿಗೆ ನಿವೇಶನ, ಪಿಂಚಣಿ, ಪ್ರಬುದ್ಧ ಛಾಯಾಗ್ರಾಹಕರಿಗೆ ರಾಜ್ಯೋತ್ಸವ ಹಾಗೂ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಮತ್ತು ಛಾಯಾಗ್ರಾಹಕರ ಕುಟುಂಬಕ್ಕೆ ಆರೋಗ್ಯ ರಕ್ಷಣೆ, ಮಕ್ಕಳಿಗೆ ಆರ್.ಟಿ.ಇ ಸೌಲಭ್ಯ, ವಿದ್ಯಾಭ್ಯಾಸ ವೇತನ ನೆರವು ನೀಡಬೇಕೆನ್ನುವುದು ಒತ್ತಾಯವಾಗಿದ್ದು ಇದಕ್ಕಾಗಿ ಇಂದು ಸ್ಟುಡಿಯೋ ಬಂದ್ ಮಾಡಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

