ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ತಾಲೂಕು ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಸರಳವಾಗಿ ಆಚರಿಸಲಾಯಿತು.
ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಅರುಳ್ ಕುಮಾರ್, ರಾಮಾಯಣ ಸರ್ವ ಕಾಲಕ್ಕೂ ಪ್ರಸ್ತುತವಾಗಿದ್ದು, ನೂರಾರು ವರ್ಷ ಕಳೆದರೂ ಸಹ ಅದರಲಿನ ಮೌಲ್ಯಗಳು ಜೀವಂತವಾಗಿರುತ್ತವೆ. ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ರಾಮಾಯಣದ ಸಾಹಿತ್ಯ ವಿಪುಲವಾಗಿದೆ. ರಾಮಾಯಣ ಜನರಿಗೆ ಹತ್ತಿರವಾಗಿದೆ ಎನ್ನುವುದಕ್ಕೆ ಇತ್ತೀಚೆಗೆ ಕೊವಿಡ್-19 ಲಾಕ್ಡೌನ್ ಸಮಯದಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ರಾಮಾಯಣ ದಾರಾವಾಹಿ ಹೆಚ್ಚು ಜನಪ್ರಿಯತೆ ಪಡೆದಿದ್ದುದೇ ನಿದರ್ಶನವಾಗಿದೆ. ರಾಮಾಯಣದ ಪಾತ್ರಗಳನ್ನು ನಮ್ಮ ಬದುಕಿಗೆ ಸಮೀಕರಿಸಿಕೊಳ್ಳುವ ಮೂಲಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಟಿ.ಎಸ್.ಶಿವರಾಜ್, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಸೋಮಶೇಖರ್, ವಾಲ್ಮೀಕಿ ಸಂಘದ ಅಧ್ಯಕ್ಷ ಪ್ರೇಮಕುಮಾರ್ ವಾಲ್ಮೀಕಿ ಸಂಘದ ಉಪಾಧ್ಯಕ್ಷ ಕುಮಾರ್, ಕನ್ನಡ ಪಕ್ಷ ತಾ. ಅಧ್ಯಕ್ಷ ಸಂಜೀವನಾಯಕ್, ಪ್ರ.ಕಾರ್ಯದರ್ಶಿ ಡಿ.ಪಿ.ಆಂಜನೇಯ, ತಾಪಂ ಮಾಜಿ ಅಧ್ಯಕ್ಷೆ ದೇವರಾಜಮ್ಮ, ಸಮುದಾಯದ ಮುಖಂಡ ಅಶ್ವತ್ಥಪ್ಪ ಮತ್ತಿತರರು ಇದ್ದರು.

