ದೊಡ್ಡಬಳ್ಳಾಪುರ: ಇತರರಿಗೆ ಕನ್ನಡದ ಬಗ್ಗೆ ಉಪದೇಶ ಮಾಡುವ ಮೊದಲು ಕನ್ನಡ ನಾಡು,ನುಡಿಗೆ ನಾವು ಮೊದಲು ಬದ್ಧರಾಗಿರಬೇಕು ಎಂದು ಹಿರಿಯ ಪತ್ರಕರ್ತ ರಾಜೇಂದ್ರಕುಮಾರ್ ಹೇಳಿದರು. ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಆಯೋಜಿಸಿದ್ದ 65ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡದ ಬಗ್ಗೆ ಇತರರಿಗೆ ಉಪದೇಶ ಮಾಡುವ ಮೊದಲು ನಮ್ಮ ಬದ್ದತೆ ಎಷ್ಟಿದೆ ಎಂಬುದನ್ನು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ ಎಂದರು.
ಹಿರಿಯ ಕನ್ನಡ ಹೋರಾಟಗಾರ ತ.ನ. ಪ್ರಭುದೇವ್ ಮಾತನಾಡಿ, ಕನ್ನಡದ ಅಸ್ಮಿತೆಯನ್ನು ಉಳಿಸುವ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆ, ಕನ್ನಡ ನಾಡಿನ ಚರಿತ್ರೆ,ಕವಿಪುಂಗವರ ಕೊಡುಗೆಗಳನ್ನು, ಕನ್ನಡದ ಕೊಡುಗೆಗಳನ್ನು ತಿಳಿದುಕೊಳ್ಳುವ ಜವಾಬ್ದಾರಿ ಇದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷೆ ಪ್ರಮೀಳ ಮಹಾದೇವ್, ಕಸಾಪ ಕಾರ್ಯದರ್ಶಿ ಜ್ಯೋತಿಕುಮಾರ್, ಕಾರ್ಯಾಧ್ಯಕ್ಷರಾದ ಶ್ರೀನಿವಾಸ್ ತರಿದಾಳ್, ಡಿ.ಈ.ಶಿವಕುಮಾರ್, ಪ್ರಾಂಶುಪಾಲ ಕೆ.ಆರ್. ರವಿಕಿರಣ್, ನಗರಾಧ್ಯಕ್ಷ ಬಿ.ಪಿ .ಹರಿಕುಮಾರ್, ಪ್ರವೀಣ್ , ಸೂರಿ , ಎನ್.ವೆಂಕಟೇಶ್, ಶ್ರೀ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ನವೀನ್ ಪ್ರಭುದೇವ್ , ಗೌರವ ಅಧ್ಯಕ್ಷ ಪುಟ್ಟಪ್ಪ, ಧ್ರುವಸರ್ಜಾ ಅಭಿಮಾನಿ ಸಂಘ ಪದಾಧಿಕಾರಿಗಳು, ಕಸಾಪ ಪದಾಧಿಕಾರಿಗಳು ಹಾಜರಿದ್ದರು.

