ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಂಡದ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಶ್ರೀ ಅಮರೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ ನೆರವೇರಿಸಿದ್ದರೆ, ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ ಅನ್ನ ದಾಸೋಹಕ್ಕೆ ದೇಣಿಗೆ ಹಾಗೂ ಶ್ರೀ ಶಾರದ ಸಹಸ್ರನಾಮಕ್ಕೆ ಕಾಣಿಕೆ ಸಲ್ಲಿಸಿ ರಶೀದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಇಂಡಿಯನ್ ಪ್ರೀಮಿಯನ್ ಲೀಗ್ 2020ರ ಲೀಗ್ ಹಂತದ ಕೊನೆ ಪಂದ್ಯ ಆಡಲು ಸಜ್ಜಾಗಿರುವ ಆರ್‌ಸಿಬಿ ತಂಡದ ಪರ ಗೆಲುವಿಗಾಗಿ ಅಭಿಮಾನಿಗಳು ವಿವಿಧ ರೀತಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಇಂದು ಆರ್ ಸಿಬಿ ತಂಡ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದ್ದು ಗೆದ್ದರೆ ಪ್ಲೇ ಆಫ್ ಖಚಿತವಾಗಲಿದೆ. ಈ ಹಿನ್ನಲೆ ಪಂದ್ಯದಲ್ಲಿ ಗೆಲುವಿಗೆ ಆರ್‌ಸಿಬಿ ಅಭಿಮಾನಿಗಳು ದೇವರಿಗೆ ಮೊರೆ ಹೋಗಿದ್ದಾರೆ.

