ಅಬುಧಾಬಿ: ಡೆಲ್ಲಿ ವಿರುದ್ಧ ನಡೆದ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಸೋತರೂ ಪ್ಲೇ ಆಫ್‌ಗೆ ಪ್ರವೇಶ ಪಡೆಯುವ ಮೂಲಕ ಆರ್‌ಸಿಬಿ ತಂಡ ಹಾಗೂ ಅಭಿಮಾನಿಗಳ ಪ್ಲೇ ಆಫ್ ಕನಸು ನನಸಾಗಿದೆ.
ಇಂದಿನ ಪಂದ್ಯದಲ್ಲಿ ಕೋಲ್ಕತ್ತಾಕ್ಕಿಂತ ಉತ್ತಮ ರನ್ ರೇಟ್ ಉಳಿಸಿಕೊಂಡ ಕಾರಣ ಆರ್‌ಸಿಬಿ ಪ್ಲೇ ಆಫ್ ತಲುಪಿದೆ. ಟಾಸ್ ಗೆದ್ದು ಬ್ಯಾಟಿಂಗ್ ಬಿಟ್ಟು ಕೊಟ್ಟ ಡೆಲ್ಲಿ 6 ವಿಕೆಟ್‌ಗಳ ಜಯವನ್ನು ಸಾಧಿಸಿ 16 ಅಂಕ ಪಡೆಯುವ ಮೂಲಕ ಎರಡನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಡೆಲ್ಲಿ 19 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 154 ರನ್ ಹೊಡೆಯುವ ಮೂಲಕ ಗುರಿ ಮುಟ್ಟಿತು.
ನಾಳೆ ಕೋಲ್ಕತ್ತಾದ ಪ್ಲೇ ಆಫ್ ಭವಿಷ್ಯ ನಡೆಯಲಿರುವ ಪಂದ್ಯದ ಮೇಲೆ ನಿಂತಿದೆ. ಮುಂಬೈ ವಿರುದ್ಧ ಹೈದರಾಬಾದ್ ಸೋತರೆ ಕೋಲ್ಕತ್ತಾ 14 ಅಂಕದ ಆಧಾರದ ಮೇಲೆ 4ನೇ ತಂಡವಾಗಿ ಪ್ಲೇ ಆಫ್ ಪ್ರವೇಶಲಿದೆ.

