ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಬಳಿ ಚಾಲಕನೋರ್ವ ರಾಷ್ಟ್ರ ದ್ವಜವನ್ನು ಸುಟ್ಟು ಅಪಮಾನ ಮಾಡಿರುವ ಘಟನೆ ನಡೆದಿದೆ
ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಮಾಸ್ತಿ ಗ್ರಾಮದ ತಿಮ್ಮಸಂದ್ರ ಬಳಿ ಉತ್ತರ ಭಾರತ ಮೂಲದ ಟಿಪ್ಪರ್ ಲಾರಿ ಡ್ರೈವರ್ ಸತ್ಯೇಂದ್ರ ಕುಮಾರ್ ಯಾದವ್ ರಾಷ್ಟ್ರ ಧ್ವಜಕ್ಕೆ ಅಪಮಾನವೆಸಿಗಿದ್ದ ಕಿಡಿಗೇಡಿ.
ರಾಷ್ಟ್ರಧ್ವಜಕ್ಕೆ ಅಪಮಾನವೆಸಗಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿ, ರಾಷ್ಟ್ರ ಧ್ವಜವನ್ನು ಹಿಡಿ ಜೈಕಾ ಹಾಕಿಸುತ್ತಾ ಮೆರವಣಿಗೆ ಮಾಡಿಸಿದ್ದಾರೆ.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಪರಾಧಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

