ದೊಡ್ಡಬಳ್ಳಾಪುರ: ಇದೇ ತಿಂಗಳ 8 ರಂದು ನಡೆಯಲಿರುವ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜೆಡಿಎಸ್ ಬೆಂಬಲಿತ ಅಧಿಕೃತ ಅಭ್ಯರ್ಥಿಗಳಿಗೆ ಮಾತ್ರ ಮತ ನೀಡುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಮನವಿ ಮಾಡಿದರು.
ನಗರದ ಬಸವ ಭವನದ ಬಳಿಯಿರುವ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ “ಬಿ” ತರಗತಿ ಕ್ಷೇತ್ರದ ಚುನಾವಣೆಗೆ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಮುಖಂಡರು ಒಮ್ಮತದಿಂದ ಅಭ್ಯರ್ಥಿಗಳನ್ನಾಗಿ ಒಂಬತ್ತು ಮಂದಿಯನ್ನು ಆಯ್ಕೆ ಮಾಡಿದ್ದು, ಮತ್ಯಾರು ಸಹ ಜೆಡಿಎಸ್ ಬೆಂಬಲಿತರಲ್ಲ ಹಾಗೂ ಈ ಚುನಾವಣೆ ಯಾವುದೇ ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿಲ್ಲವೆಂದರು.
ತಾಲೂಕು ಅಧ್ಯಕ್ಷ ಎಂ.ಲಕ್ಷ್ಮೀಪತಯ್ಯ ಮಾತನಾಡಿ, ವರಿಷ್ಟರ ನಿರ್ಣಯದಂತೆ ಟಿಎಪಿಎಂಸಿಎಸ್ ಬಿ ತರಗತಿ ಕ್ಷೇತ್ರಕ್ಕೆ ಸಾಮಾನ್ಯ ಕ್ಷೇತ್ರದಿಂದ ರಾಜಣ್ಣ.ಕೆ.ಆರ್, ರಮೇಶ್, ಶಿವಕುಮಾರ್.ಆರ್.ಸಿ, ಬಿಸಿಎಂ”ಬಿ” ಕ್ಷೇತ್ರಕ್ಕೆ ಅಂಜನೇಗೌಡ.ವಿ, ಬಿಸಿಎಂ”ಎ” ಕ್ಷೇತ್ರಕ್ಕೆ ಲಕ್ಷ್ಮೀನಾರಾಯಣ್ ಕಂಚಿಗನಾಳ, ಸಾಮಾನ್ಯ ಮಹಿಳೆ ಕ್ಷೇತ್ರಕ್ಕೆ ಲಕ್ಷ್ಮೀನಾಗೇಶ್, ಚಂದ್ರಕಲಾ ಮಂಜುನಾಥ್, ಪರಿಶಿಷ್ಟ ಜಾತಿ ಕ್ಷೇತ್ರಕ್ಕೆ ಮುನಿರಾಜು, ಪರಿಶಿಷ್ಟ ಪಂಗಡ ಕ್ಷೇತ್ರಕ್ಕೆ ಗೋವಿಂದರಾಜ್ ಅವರನ್ನು ಅಭ್ಯರ್ಥಿಗಳಾಗಿ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ, ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಅಧಿಕೃತಗೊಳಿಸಲಾಗಿದ್ದು ಮತ್ಯಾರಿಗೂ ಪಕ್ಷ ಬೆಂಬಲ ನೀಡಿಲ್ಲ.
ಮತದಾರರು ಯಾವುದೇ ಗೊಂದಲಕ್ಕೆ ಒಳಗಾಗದೆ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಕಣಿವೇಪುರ ಸುನೀಲ್ ಕುಮಾರ್, ಎಪಿಎಂಸಿ ನಿರ್ದೇಶಕ ಲೋಕೇಶ್, ಮುಖಂಡರಾದ ಕೊಡಿಗೇಹಳ್ಳಿ ಕೆಂಪೇಗೌಡ, ಸಂಪಂಗಿರಾಮಯ್ಯ, ಕೇಶವಮೂರ್ತಿ ಮತ್ತಿತರಿದ್ದರು.

