ಮುಂಬೈ: ಬುಧವಾರ ಬೆಳಗ್ಗೆ ರಿಪಬ್ಲಿಕ್ ವಾಹಿನಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಅವರ ನಿವಾಸದಿಂದ ಮುಂಬೈ ಪೊಲೀಸರು ಬಂಧಿಸಿದ ಪ್ರಕರಣ ದೇಶಾದ್ಯಂತ ತೀವ್ರವಾದ ಚರ್ಚೆಗೆ ಕಾರಣವಾಗಿದ್ದು, ಪೊಲೀಸರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಏಕಾಏಕಿ ಅರ್ನಬ್ ಗೋಸ್ವಾಮಿಯವರ ಮನೆಗೆ ನುಗ್ಗಿದ ಪೊಲೀಸರು ಅರ್ನಬ್ ಮತ್ತವರ ಕುಟುಂಬಸ್ಥರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ಘಟನೆಯ ವಿಡಿಯೋವನ್ನೂ ರಿಪಬ್ಲಿಕ್ ವಾಹಿನಿಯು ಪ್ರಸಾರ ನಡೆಸಿದೆ.
ಮುಂಬೈ ಪೊಲೀಸ್ ನ ಎನ್ಕೌಂಟರ್ ಸ್ಪೆಷ್ಯಾಲಿಸ್ಟ್ ಎಪಿಐ ಸಚಿನ್ ವಾಝೆ ಅವರು ಅರ್ನಬ್ ಅವರ ಬಂಧನದ ಸುದ್ದಿಯನ್ನು ಖಚಿತಪಡಿಸಿದ್ದು, ಎರಡು ವರ್ಷಗಳಿಗೆ ಮುನ್ನ ಪೊಲೀಸರೇ ಮುಚ್ಚಿದ್ದ ಕಡತದ ಪ್ರಕರಣವೊಂದರ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದಿದ್ದಾರೆ. ಅಲ್ಲದೆ ರಿಪಬ್ಲಿಕ್ ಟಿವಿ ವಾಹಿನಿಯು ಒಳಪಟ್ಟಿರುವ ಟಿಆರ್ ಪಿ ಪ್ರಕರಣಕ್ಕೂ ಬಂಧನಕ್ಕೂ ಯಾವುದೇ ಸಂಬಂಧವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅರ್ನಬ್ ರನ್ನ ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಪೊಲೀಸರು14 ದಿನಗಳ ಕಸ್ಟಡಿಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಲಿಬಾಗ್ ನ್ಯಾಯಾಲಯ ತಿರಸ್ಕರಿಸಿದೆ, ಹಾಗೂ ಅರ್ನಬ್ ಅವರನ್ನು ನ್ಯಾಯಾಂಗ ಕಸ್ಟಡಿ ನೀಡುವ ಜೊತೆಗೆ ಜಾಮೀನು ಪತ್ರಗಳನ್ನು ಸಿದ್ಧವಾಗಿಡುವಂತೆ ತಿಳಿಸಿದೆ. ಮಧ್ಯರಾತ್ರಿಯವರೆಗೆ ನಡೆದ ವಿಚಾರಣೆಯ ನಂತರ, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಕಸ್ಟಡಿಯನ್ನು ನೀಡಿತು.
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಈ ಘಟನೆಯನ್ನು ಖಂಡಿಸಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಪತ್ರಿಕಾ ಸ್ವಾತಂತ್ರದ ಮೇಲಿನ ದಾಳಿಯನ್ನು ನಾವು ಖಂಡಿಸುತ್ತೇವೆ. ಮಾಧ್ಯಮಗಳನ್ನು ನಡೆಸಿಕೊಳ್ಳುವ ರೀತಿಯು ಇದಲ್ಲ, ಈ ಘಟನೆಯು ನಮಗೆ ಮಾಧ್ಯಮಗಳ ಇದೆ ರೀತಿಯಾಗಿ ನಡೆಸಿಕೊಂಡ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ #ಐಸಪೋರ್ಟ್‌ಅರ್ನಬ್ ಟ್ರೆಂಡ್ ಸೃಷ್ಟಿ ಮಾಡಿದೆ. ದೇಶದ ಮೂಲೆ ಮೂಲೆಯಿಂದಲೂ ಅವರಿಗೆ ಬೆಂಬಲಗಳು ವ್ಯಕ್ತವಾಗಿದೆ. ಮುಚ್ಚಿದ ಪ್ರಕರಣವನ್ನು ಮತ್ತೆ ತೆರೆದು ಮುಂಬೈ ಪೊಲೀಸರು ಮತ್ತು ಸರ್ಕಾರ ಅರ್ನಬ್ ವಿರುದ್ಧ ದ್ವೇಷವನ್ನು ಸಾಧಿಸುತ್ತಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅರ್ನಬ್ ಪರ ಬೆಂಬಲ ನೀಡುತ್ತಿದ್ದಾರೆ. ಮತ್ತೊಂದೆಡೆ ಕರ್ನಾಟಕದಲ್ಲಿ ಪವರ್ ಟಿವಿ ಮೇಲೆ ನಡೆದ ದಾಳಿಯನ್ನು ಏಕೆ ಖಂಡಿಸುತ್ತಿಲ್ಲ ಎಂಬ ಪ್ರಶ್ನೆ ಸಹ ಉದ್ಭವಿಸಿದೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

