ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ರಚಿಸಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಿ.ಬಲರಾಮ್ ಅಧಿಸೂಚನೆ ಹೊರಡಿಸಿದ್ದಾರೆ.
ಅಧಿಸೂಚನೆಯಂತೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಅಧ್ಯಕ್ಷರಾಗಿ ಶಾಸಕ ಟಿ.ವೆಂಕಟರಮಣಯ್ಯ, ಕಾರ್ಯದರ್ಶಿಯಾಗಿ ತಹಶಿಲ್ದಾರ್ ಟಿ.ಎಸ್.ಶಿವರಾಜ್ ನೇಮಿಸಲಾಗಿದೆ.
ಅಲ್ಲದೆ ಸಾಮಾನ್ಯ ಮೀಸಲಾತಿಯಡಿ ಸದಸ್ಯರಾಗಿ ಎಲೆಪೇಟೆಯ ಮುನಿರಾಜು, ಪರಿಶಿಷ್ಟ ಜಾತಿ ಮೀಸಲಾತಿಯಡಿ ಸದಸ್ಯರಾಗಿ ದೊಡ್ಡಬೆಳವಂಗಲದ ಚಿಕ್ಕರಾಮಯ್ಯ, ಮಹಿಳಾ ಮೀಸಲಾತಿಯಡಿ ಕಾಡುಕುಂಟೆಯ ಮಮತಪ್ರಕಾಶ್ ರೆಡ್ಡಿರವನ್ನು ನೇಮಿಸಲಾಗಿದೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

