ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಭಾನುವಾರ ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಫಲಿತಾಂಶ ಪ್ರಕಟವಾಗಿದೆ.
‘ಎ’ ತರಗತಿಯಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಎಂ.ವೆಂಕಟೇಶ್, ಸಿದ್ದರಾಮಯ್ಯ, ಮಾರೇಗೌಡ, ಎಂ.ಗೋವಿಂದರಾಜ್ ಆಯ್ಕೆಯಾಗಿದ್ದಾರೆ.
ಬೆಳಿಗ್ಗೆ 9 ಗಂಟೆಯಿಂದ ಆರಂಭವಾದ ಮತದಾನದಲ್ಲಿ ನೂರಾರು ಜನ ಸಾಲುಗಟ್ಟಿ ನಿಂತು ಮತ ಚಲಾಯಿಸಿದರು. ಹಿರಿಯರು ವೀಲ್ ಚೇರ್‌ಗಳಲ್ಲಿ ಬಂದು ಸಹ ಮತಚಲಾಯಿಸಿದ್ದು ವಿಶೇಷವಾಗಿತ್ತು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ಎಲ್ಲಾ 13 ಸ್ಥಾನಗಳಿಗು ಸಹ ಅಭ್ಯರ್ಥಿಗಳು ನಾಮ ಪತ್ರಗಳನ್ನು ಸಲ್ಲಿಸಿದ್ದರು. ಆದರೆ ಬಿಜೆಪಿ ಜೆಡಿಎಸ್ ಪಕ್ಷದ ಅಪ್ಪಯ್ಯಣ್ಣ ಅವರ ಬಣದೊಂದಿಗೆ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಎ ಮತ್ತು ಬಿ ತರಗತಿ ಸೇರಿ ಆರು ಸ್ಥಾನಗಳಿಗೆ ಮಾತ್ರ ನಾಮ ಪತ್ರ ಸಲ್ಲಿಸಿದ್ದರು.
ಶಾಸಕರಿಂದ ಮತ ಚಲಾವಣೆ: ಕೋವಿಡ್-19 ದೃಢಪಟ್ಟಿದ್ದರಿಂದ 13 ದಿನಗಳಿಂದಲು ಮನೆಯಲ್ಲಿಯೇ ಇದ್ದ ಶಾಸಕ ಟಿ.ವೆಂಕಟರಮಣಯ್ಯ ಅವರು ಭಾನುವಾರ ನಗರಕ್ಕೆ ಆಗಮಿಸಿ ಟಿಎಪಿಎಂಸಿಎಸ್ ಚುನಾವಣೆಯಲ್ಲಿ ಮತ ಚಲಾವಣೆ ಮಾಡಿದರು.
‘ಬಿ’ ತರಗತಿಯಿಂದ ಆಯ್ಕೆಯಾದವರು: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಜಿ.ಎನ್.ರಂಗಪ್ಪ, ಎಸ್.ದಯಾನಂದ್. ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಕೆ.ಸಿ.ಲಕ್ಷ್ಮೀನಾರಾಯಣ, ವಿ.ಅಂಜನೇಗೌಡ, ಗೋವಿಂದರಾಜ್, ಚಂದ್ರಕಲಾ, ಲಕ್ಷ್ಮೀ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಟಿ.ವಿ.ಲಕ್ಷ್ಮೀನಾರಾಯಣ. ಜೆಡಿಎಸ್ ಬಂಡಾಯ ಅಭ್ಯರ್ಥಿ ಎಂ.ಆನಂದ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಟಿ.ಎಸ್.ಶಿವರಾಜ್ ಹರಿತಲೇಖನಿಗೆ ತಿಳಿಸಿದ್ದಾರೆ.
ಒಟ್ಟಾರೆ ‘ಎ’ ತರಗತಿಯಿಂದ ಕಾಂಗ್ರೆಸ್ ಬೆಂಬಲಿತ 4 ಜನ ಆಯ್ಕೆಯಾಗಿದ್ದರೆ, ‘ ಬಿ ‘ ತರಗತಿಯಲ್ಲಿ ಜೆಡಿಎಸ್ ಬೆಂಬಲಿತ 5, ಕಾಂಗ್ರೆಸ್ ಬೆಂಬಲಿತ 2 ಹಾಗೂ ಬಿಜೆಪಿ ಮತ್ತು ಜೆಡಿಎಸ್ ಬಂಡಾಯದಿಂದ ತಲಾ ಒಬ್ಬರು ಆಯ್ಕೆಯಾಗಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

