ಮಹಾರಾಷ್ಟ್ರ: ನನ್ನ ಜೀವಕ್ಕೆ ಅಪಾಯವಿದೆ ಎಂದು ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಹೇಳಿದ್ದಾರೆ. ಅಲ್ಲದೆ ನ್ಯಾಯಾಲಯಗಳಿಗೆ ಸಹಾಯ ಮಾಡುವಂತೆ ಒತ್ತಾಯಿಸುವಂತೆ ಭಾರತದ ಜನರಿಗೆ ಮನವಿ ಮಾಡಿದರು.
ಅಲಿಬಾಗ್‌ನ ಕ್ಯಾರೆಂಟೈನ್ ಸೆಂಟರ್‌ನಿಂದ ತಲೋಜಾ ಜೈಲಿಗೆ ಸಂಪೂರ್ಣ ಪೊಲೀಸ್ ವ್ಯಾನ್‌ನಲ್ಲಿ ಕರೆದೊಯ್ಯಲಾಗುತ್ತಿದ್ದ ವೇಳೆ ಅರ್ನಾಬ್ ಪೊಲೀಸ್ ವ್ಯಾನ್‌ನಿಂದ ಕಿಟಕಿ ಮೂಲಕ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನನ್ನನ್ನು ವಕೀಲರನ್ನು ಮಾತನಾಡಲು ಅವಕಾಶ ನೀಡುತ್ತಿಲ್ಲ. ನನ್ನ ಜೀವಕ್ಕೆ ಅಪಾಯವಿದೆ, ಇಂದು ಬೆಳಿಗ್ಗೆ ನನ್ನನ್ನು ಹೊಡೆದು ಪೊಲೀಸ್ ಠಾಣೆಗೆ ಎಳೆಯಲಾಯಿತು. ಅಲ್ಲಿದ್ದ ಜೈಲರ್ ಸಹ ನನ್ನ ಮೇಲೆ ಹಲ್ಲೆ ಮಾಡಿದ್ದು ನನಗೆ ವಕೀಲರೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂದಿದ್ದಾರೆ.
ನನ್ನ ಜೀವಕ್ಕೆ ಅಪಾಯವಿದೆ ಎಂದು ನಾನು ಭಾರತದ ಜನರಿಗೆ ಹೇಳುತ್ತಿದ್ದೇನೆ. ಯಾವುದೇ ವಕೀಲರೊಂದಿಗೆ ಮಾತನಾಡಲು ಬಿಡುತ್ತಿಲ್ಲ ಎಂದಿರುವ ಅವರು ನಾನು ದಬ್ಬಾಳಿಕೆಗೆ ಒಳಗಾಗುತ್ತಿದ್ದೇನೆ. ನ್ಯಾಯಾಲಯ ನನ್ನ ಪೊಲೀಸ್ ಕಸ್ಟಡಿಯನ್ನು ವಜಾಗೊಳಿಸಲಾಗಿದೆ. ಆದರೂ ಪೊಲೀಸರು ನನ್ನನ್ನು ಹೊರಗೆ ಬರಲು ಬಿಡುತ್ ನೀವು ನನ್ನ ಸ್ಥಿತಿಯನ್ನು ಗಮನಿಸುತ್ತಿದ್ದೀರಿ. ಅವರು ನನ್ನನ್ನು ಎಳೆದುಕೊಂಡು ರಾತ್ರಿ ಜೈಲಿಗೆ ತರಲು ಪ್ರಯತ್ನಿಸಿದರು.
ನ್ಯಾಯಾಲಯದಿಂದ ಜಾಮೀನು ಕೋರಲು ನನ್ನ ವಕೀಲರೊಂದಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ನಾನು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುತ್ತೇನೆ, ದಯವಿಟ್ಟು ನನಗೆ ಜಾಮೀನು ನೀಡಿ. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ನನ್ನನ್ನು ತುಂಬಾ ಹಿಂಸಿಸಲಾಗುತ್ತಿದೆ ಎಂದು ದಾರಿಯುದ್ದಕ್ಕೂ ಕೂಗು ಕೂಗಿ ಹೇಳುತ್ತಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

