ಬೆಂಗಳೂರು: ನೂತನವಾಗಿ ಖರೀದಿಸಿದ ದ್ವಿಚಕ್ರವಾಹನದಲ್ಲಿ ಉಂಟಾದ ತಾಂತ್ರಿಕ ದೋಶವನ್ನು ಪ್ರಶ್ನಿಸಿ ನ್ಯಾಯಕ್ಕಾಗಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮೆಟ್ಟಿಲೇರಿದ್ದ ದ್ವಿಚಕ್ರವಾಹನ ಮಾಲೀಕನಿಗೆ ವೇದಿಕೆ ಪರಿಹಾರ ನೀಡಿದ್ದು, ಬಿಮಲ್ ಮೋಟರ್ಸ್ಗೆ ಬಿಸಿ ಮುಟ್ಟಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಕೋರ್ಟ್ ರಸ್ತೆಯಲ್ಲಿನ ಬಿಮಲ್ ಮೋಟರ್ಸ್ ನ ಉಪಶಾಖೆಯಲ್ಲಿ 2019ರಲ್ಲಿ ಖರೀದಿಸಿದ
ಹಿರೋ ಗ್ಲಾಮರ್ ಎಸ್.ಎಕ್ಸ್ ಡಿ.ಎಸ್.ಎಸ್ ಕಾಸ್ಟ್ ಟೇಕ್ನಿಕೋ ಬ್ಲೂ ಬ್ಲಾಕ್ ದ್ವಿಚಕ್ರ ವಾಹನವನ್ನು ಗಂಗರಾಜ್ ಶಿರವಾರ ಎನ್ನುವವರು 82,500ರೂ ನೀಡಿ ಖರೀದಿ ಮಾಡಿದ್ದರು. ಆದರೆ ಈ ದ್ವಿಚಕ್ರವಾಹನದಲ್ಲಿ ತಾಂತ್ರಿಕ ದೋಶ ಕಂಡುಬಂದ ಕಾರಣ ನ್ಯಾಯವಾದಿ ಟಿ.ಕೆ.ಹನುಮಂತರಾಜ್ ಮೂಲಕ 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿದ್ದರು.
ಈ ಪ್ರಕರಣವನ್ನು ಆಲಿಸಿದ ವೇದಿಕೆ. ದೂರು ದಾರ ಗಂಗಾರಾಜ ಶಿರವಾರ ಮನವಿಯನ್ನು ಪುರಸ್ಕರಿಸಿ, ವಾಹನದ ದೋಶಕ್ಕೆ ಕಾರಣವಾದ ಭಾಗವನ್ನು ಹೊಸದಾಗಿ ಬದಲಿಸುವುದು, ಪ್ರಕರಣದ ಖರ್ಚಿಗೆ 5,000 ರೂ, ಮಾನಸಿಕ ನೆಮ್ಮದಿ, ದೈಹಿಕ ಶ್ರಮ ಹಾಳು ಮಾಡಿದ ಕಾರಣ 5,000 ನಷ್ಟ ಪರಿಹಾರ ನೀಡುವಂತೆ ಆದೇಶಿಸಿದೆ.
ಅಲ್ಲದೆ 30 ದಿನದ ಒಳಗಾಗಿ ಹೊಸ ಭಾಗವನ್ನು ಅಳವಡಿಸಿ ವಾಹನ ಚಾಲನೆಗೆ ತೊಂದರೆ ಬರದಂತೆ ರಿಪೇರಿ ಮಾಡಿಕೊಡದಿದ್ದಲ್ಲಿ 30 ದಿನಗಳ ನಂತರದ 15 ದಿನಗಳ ಒಳಗಾಗಿ ವಾಹನ ಖರೀದಿ ಮಾಡಿದ ಸಂಪೂರ್ಣ ಹಣ, ನೊಂದಾವಣೆ ಖರ್ಚು, ರಸ್ತೆ ತೆರಿಗೆ ಸೇರಿದಂತೆ ಶೇ.12 ಬಡ್ಡಿಯೊಂದಿಗೆ ದೂರು ಸಲ್ಲಿಸಿದ ದಿನದಿಂದ ಪಾವತಿ ಮಾಡುವಂತೆ ಆದೇಶಿಸಿದೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

