ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 13ನೇ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಹೊರಬಿದ್ದ ಬೆನ್ನಲ್ಲೆ ತಂಡದ ನಾಯಕ ವಿರಾಟ್ ಕೊಹ್ಲಿ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಭಾವನಾತ್ಮ ಸಂದೇಶವನ್ನು ಬರೆದಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಸಾಧಾರಣ ಮೊತ್ತದ ಗುರಿ ಆರ್ ಸಿಬಿ ನೀಡಿತ್ತು. ಹಿಂಬಾಲಿಸಿದ ಎಸ್ ಆರ್ ಹೆಚ್ ತಂಡ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ಜಯ ಸಾಧಿಸಿತು. ಸೋಲಿನೊಂದಿಗೆ ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಗೆಲುವಿನ ಕನಸು ಮತ್ತೊಮ್ಮೆ ಕನಸಾಗಿಯೆ ಉಳಿಯಿತು. ಪಂದ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ, ಅಭಿಮಾನಿಗಳಿಗಾಗಿ ಭಾವುಕ ಸಂದೇಶವನ್ನು ಬರೆದಿದ್ದಾರೆ.
ಟೂರ್ನಿಯಿಂದ ಆರ್‌ಸಿಬಿ ಹೊರಬಿದ್ದರೂ ತಂಡದ ಆಟಗಾರರ ಬಗ್ಗೆ ಕೊಹ್ಲಿ ಹೆಮ್ಮೆ ಅನಿಸುತ್ತಿದೆ ಹಾಗೂ ಇಲ್ಲಿಯವರೆಗೂ ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ.ಟೂರ್ನಿಯಲ್ಲಿ ನಮ್ಮ ಪಾಲಿಗೆ ಏರಿಳಿಗಳಾಗಿವೆ. ಒಂದು ತಂಡವಾಗಿ ನಮಗೆ ಇದು ಉತ್ತಮ ಪ್ರಯಾಣವಾಗಿದೆ. ಹೌದು, ಸಂಗತಿಗಳು ನಮ್ಮ ಹಾದಿಯಲ್ಲಿ ಇರಲಿಲ್ಲ. ಆದರೆ ಇಡೀ ತಂಡದ ಬಗ್ಗೆ ಹೆಮ್ಮೆ ಇದೆ. ಬೆಂಬಲ ನೀಡಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ನಿಮ್ಮ ಪ್ರೀತಿ ನಮಗೆ ಶಕ್ತಿ ನೀಡುತ್ತದೆ. ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಸೇರುತ್ತೇವೆ ಎಂದು ವಿರಾಟ್ ಕೊಹ್ಲಿ ತಂಡದ ಫೋಟೊದೊಂದಿಗೆ ಈ ಶೀರ್ಷಿಕೆಯನ್ನು ಪೋಸ್ಟ್ ಮಾಡಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

