ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧ ಮಾಡಿರುವ ರಾಜ್ಯ ಸರ್ಕಾರಕ್ಕೆ ತನ್ನದೆ ಅಡಳಿತ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಾಮಾಜಿಕ ಜಾಲತಾಣದಲ್ಲಿ ಟಾಂಗ್ ನೀಡಿದ್ದಾರೆ.
ಫೇಸ್‍ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮದೇ ಸರ್ಕಾರ ವಿರುದ್ಧ ಹರಿಹಾಯ್ದಿರುವ ಬಿಕೆ ಯತ್ನಾಳ್, ಇಕೋ ಫ್ರೆಂಡ್ಲಿ ಗಣೇಶ ಹಬ್ಬ ಮತ್ತು ನಾಯ್ಸ್ ಲೆಸ್ ದೀಪಾವಳಿ ರೀತಿಯಲ್ಲೇ ಬ್ಲಡ್‍ಲೆಸ್ ಬಕ್ರೀದ್, ನಾಯ್ಸ್ ಲೆಸ್ ಫ್ರೈಡೇನೂ ಮಾಡೋಣ ಎಂದು ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಅವರ ಫೇಸ್‍ಬುಕ್ ಪೇಜ್ ಪೋಸ್ಟ್ ನ ಮಾಹಿತಿಯಂತೆ ಹಿಂದೂಗಳು ಸಾಮೂಹಿಕವಾಗಿ ಸೇರುವುದೇ ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬ, ದಸರಾ-ದುರ್ಗಪೂಜೆ ಮತ್ತು ದೀಪವಾಳಿ ಸಮಯದಲ್ಲಿ. ಆದರೆ ಗಣೇಶ ಹಬ್ಬ ಬಂದ್ರೆ ಇಕೋ ಫ್ರೆಂಡ್ಲಿ ಗಣೇಶ ಹಬ್ಬ, ದೀಪಾವಳಿ ಬಂದ್ರೆ ನಾಯ್ಸ್ ಲೆಸ್ ದೀಪಾವಳಿ ಮಾಡಿ ಎಂದು ಭೋದನೆ ಮಾಡುತ್ತಾರೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಇಕೋ ಫ್ರೆಂಡ್ಲಿ ಗಣೇಶ ಹಬ್ಬ ಮತ್ತು ನಾಯ್ಸ್ ಲೆಸ್ ದೀಪಾವಳಿ ಇವುಗಳ ಜೊತೆಗೆ ನಾಯ್ಸ್ ಲೆಸ್ ಫ್ರೈಡೇ, ಬ್ಲಡ್‍ಲೆಸ್ ಬಕ್ರಿದ್ ನತ್ತು ಕ್ರ್ಯಾಕರ್ಲೆಸ್ ಡಿಸೆಂಬರ್ 31 ನೈಟ್ ಇವೆಲ್ಲವುಗಳನ್ನು ಮಡೋಣ. ಬಕ್ರಿದ್‍ನಲ್ಲಿ ರಕ್ತ ಹರಿಸುವುದು ಬೇಡ. ಡಿಸೆಂಬರ್ 31ರಂದು ಪಟಾಕಿ ಹೊಡೆಯುವುದು ಬೇಡ. ಫ್ರೈಡೇ ಸ್ಪೀಕರಿನಲ್ಲಿ ಕೂಗುವುದು ಬೇಡ. ರಸ್ತೆ ಮೇಲೆ ನಮಾಜು ಮಾಡುವುದು ಬೇಡ. ಬೀದಿಲಿ ಪಟಾಕಿ ಹೊಡೆಯೋದು ಬೇಡ. ನಾವೆಲ್ಲ ಮನೆಯಲ್ಲಿ ದೀಪ ಹಚ್ಚುತ್ತೇವೆ, ಅವರು ಸ್ಪೀಕರ್ ಹಚ್ಚದೇ ನಾಮಜು ಮಾಡಲಿ ರಸ್ತೆ ಮೇಲೆ ಬೇಡ ಎಂದು ಹಾಕಿಕೊಂಡಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

